ಆರೋಗ್ಯ ಮಂತ್ರಿ ಎದೆಗೆ ಎರಡು ಗುಂಡು ಹೊಡೆದ ಪೊಲೀಸ್ ಅಧಿಕಾರಿ! ಪರಿಸ್ಥಿತಿ ಚಿಂತಾಜನಕ!
ಒಡಿಶಾದ ಆರೋಗ್ಯ ಸಚಿವ ನಬ ಕಿಶೋರ್ ದಾಸ್ ಮೇಲೆ ಪೋಲಿಸ್ ಅಧಿಕಾರಿ ಗುಂಡಿನ ದಾಳಿ ಮಾಡಿದ್ದಾನೆ. ಜರ್ಸುಗುಡ ಬಳಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ಸಲುವಾಗಿ ಸಚಿವರು ಕಾರಿನಿಂದ ಕೆಳಗಿಳಿಯೋ ವೇಳೆ ಈ ಘಟನೆ ನಡೆದಿದೆ. ಎರಡು ಗುಂಡುಗಳು ಸಚಿವರ ಎದೆಗೆ ತಾಗಿ ತೀವ್ರವಾಗಿ ಗಾಯಗೊಂಡಿದಾರೆ, ಆಸ್ಪತ್ರೆಗೆ ಸೇರಿಸಲಾಗಿದೆ.