ಆಸ್ಕರ್ ವೀಕ್ಷಿಸಲು ಕೋಟ್ಯಂತರ ರೂ. ವ್ಯಯಿಸಿದ ರಾಜಮೌಳಿ!
ನವದೆಹಲಿ: ಇತ್ತೀಚೆಗಷ್ಟೇ ನಾಟು-ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಆರ್‌ಆರ್‌ಆರ್ ಸಿನಿಮಾ ಇತಿಹಾಸ ಸೃಷ್ಟಿಸಿತ್ತು. ಆದರೆ ಅದೇ ಸಿನಿಮಾದ ನಿರ್ದೇಶಕ ರಾಜಮೌಳಿಗೇ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಲು ಉಚಿತ ಟಿಕೆಟ್ ಸಿಕ್ಕಿಲ್ಲ.
ಉಳಿದಂತೆ ರಾಜಮೌಳಿ ತಂಡದ ಯಾರಿಗೂ ಉಚಿತ ಟಿಕೆಟ್ ನೀಡಲಾಗಿಲ್ಲ. ಹೀಗಾಗಿ ಸಿನಿಮಾದ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜಮೌಳಿ ಕೋಟಿಕೋಟಿ ಖರ್ಚು ಮಾಡಿದ್ದಾರೆ.
ಒಂದು ಟಿಕೆಟ್‌ಗೆ 20.6 ಲಕ್ಷ ರೂ. ಶುಲ್ಕವಿದ್ದು, ರಾಜಮೌಳಿ ಅವರ ಪತ್ನಿ, ಪುತ್ರ ಹಾಗೂ ಸೊಸೆಗೆ ಟಿಕೆಟ್ ಖರೀದಿಸಿದ್ದಾರೆ. ಅಲ್ಲದೇ ತಮ್ಮ ತಂಡಕ್ಕೂ ತಾವೇ ಟಿಕೆಟ್ ಖರೀದಿಸಿದ್ದಾರೆ. ರಾಮ್ ಚರಣ್ ಹಾಗೂ ಜ್ಯೂ.ಎನ್‌ಟಿಆರ್ ಕೂಡ ಅವರವರ ಪತ್ನಿಯರ ಜತೆಗೆ ಸ್ವಂತ ಟಿಕೆಟ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲೂ ಕೊನೆಯ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದ ತಂಡದ ವಿಡಿಯೊ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.