ಮಾದಕ ವ್ಯಸನಕ್ಕೆ ಅಡ್ಡಿಯಾಗಿದ್ದ ಕುಟುಂಬದ ನಾಲ್ವರನ್ನು ಕೊಲೆಗೈದ ಮಗ, ಆರೋಪಿ ಅರೆಸ್ಟ್
ನವದೆಹಲಿ: ಡ್ರಗ್ಸ್ ಸೇವಿಸಲು ತಡೆದಿದ್ದಕ್ಕಾಗಿ ಕುಟುಂಬಸ್ಥರನ್ನೆಲ್ಲಾ ಕೊಲೆಗೈದ ಆರೋಪದ ಮೇಲೆ 25 ವರ್ಷದ ಯುವಕನೊಬ್ಬನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
25 ವರ್ಷದ ಆರೋಪಿ ಕೇಶವ್ ಮಾದಕ ವ್ಯಸನಿಯಾಗಿದ್ದ.
ಮಾದಕ ವ್ಯಸನಿಯಾಗಿರುವ ಆರೋಪಿಯನ್ನು ಕೇಶವ್ ಕೆಲ ದಿನಗಳ ಹಿಂದೆ ಗುರ್ಗಾಂವ್‌ನಿಂದ ಮನೆಗೆ ವಾಪಸಾಗಿದ್ದ. ತನ್ನ ಮಾದಕ ವ್ಯಸನಕ್ಕೆ ಅಡ್ಡಿಯಾದ ತನ್ನ ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಕೊಲೆ ಮಾಡಿದ್ದಾನೆ. ಬಾತ್ ರೂಂನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಇನ್ನಿಬ್ಬರು ಕುಟುಂಬ ಸದಸ್ಯರು ಮಲಗುವ ಕೋಣೆಗಳಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 10:30 ರ ಸುಮಾರಿಗೆ ಮೇಲಿನ ಮಹಡಿಯಲ್ಲಿರುವ ಮನೆಯಲ್ಲಿ ಜನರ ಕಿರುಚಾಟ ಕೇಳಿಸಿಕೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ