ಚೇತರಿಸಿಕೊಂಡ ಷೇರುಪೇಟೆ; ಟಾಪ್ ಷೇರುಗಳು

ಚೇತರಿಸಿಕೊಂಡ ಷೇರುಪೇಟೆ; ಟಾಪ್ ಷೇರುಗಳು

ಇಂದು ಭಾರತೀಯ ಷೇರುಪೇಟೆ ಕಳೆದ ದಿನಗಳ ಲಾಸ್‍ನಿಂದ ಕೊಂಚ ಚೇತರಿಕೆ ಕಂಡಿತು. ಸೆನ್ಸೆಕ್ಸ್ 160 ಅಂಕ ಜಿಗಿದು 62,570ರಲ್ಲಿ ವಹಿವಾಟು ಮುಗಿಸಿತು. ನಿಫ್ಟಿ 48 ಅಂಕ ಏರಿಕೆಯಾಗಿ, 18,609ರಲ್ಲಿ ವಹಿವಾಟು ಮುಗಿಸಿದೆ. ಇಂದು ಆ್ಯಕ್ಸಿಸ್ ಬ್ಯಾಂಕ್, ಇಂಡ್‍ಸ್‍ಇಂಡ್ ಬ್ಯಾಂಕ್, ಲಾರ್ಸೆನ್, ಈಶ್ಚರ್ ಮೋಟಾರ್ಸ್, ಹಿಂಡಾಲ್ಕೋ, ಒಎನ್‍ಜಿಸಿ ಷೇರುಗಳು ಹೆಚ್ಚು ಲಾಭ ಕಂಡವು. ಸನ್ ಫಾರ್ಮಾ, ದಿವಿಸ್ ಲ್ಯಾಬ್ಸ್, ಪವರ್ ಗ್ರಿಡ್, TCS, NTPC, ಕೋಟಕ್ ಮಹೀಂದ್ರ ಷೇರುಗಳು ಹೆಚ್ಚು ನಷ್ಟ ಅನುಭವಿಸಿದವು.