ಬಂಡೀಪುರದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಫಾರಿ

ಬಂಡೀಪುರದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಫಾರಿ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶವೆಂದು ಘೋಷಣೆಯಾಗಿ 50 ವರ್ಷ ಸಂದ ಹಿನ್ನೆಲೆ ಸರ್ಕಾರಿ ಶಾಲಾ ಮಕ್ಕಳಿಗೆ ಬಂಡೀಪುರ ಮಿತ್ರ ಯೋಜನೆಯಡಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ಉಚಿತ ಸಫಾರಿ ಆಯೋಜಿಸಲಾಗಿದೆ. ಇದಕ್ಕಾಗಿ 26 ಲಕ್ಷ ರೂ. ವೆಚ್ಚದಲ್ಲಿ 30 ಆಸನ ಸಾಮರ್ಥ್ಯದ ಎರಡು ಬಸ್‌ಗಳನ್ನು ಖರೀದಿಸಿದೆ. ಸಚಿವ ಭೂಪೇಂದ್ರ ಯಾದವ್‌‌‌ ಉಚಿತ ಸಫಾರಿ ನಡೆಸಲು ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ.