ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಸಿಗಾಳಿ ಸಾಧ್ಯತೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಾ.4ರಂದು ಬಿಸಿಗಾಳಿ ಬೀಸುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಪ್ರಸ್ತುತ ದೇಶದ ಉತ್ತರ ಭಾಗಗಳಲ್ಲಿ ತಾಪಮಾನ ಏರಿಕೆ ಕಂಡಿದೆ. ಪುಣೆ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ.
ಅಲ್ಲದೆ ಮೆಡಿಟರೇನಿಯನ್ ಪ್ರದೇಶದಲ್ಲಿ ಧೂಳು ಮಿಶ್ರಿತ ಗಾಳಿ ಆರಂಭವಾಗಿದೆ. ಒತ್ತಡ ಕಡಿಮೆಯಾದರೆ ಡಸ್ಟ್ ಸ್ಟಾರ್ಮ್ ದಕ್ಷಿಣದ ಕಡೆಗೂ ಬೀಸುವ ಸಾಧ್ಯತೆ ಇದೆ.
ಎರಡೂ ವಾರ ಬಳಿಕ ಮುಂಗಾರು ನಿರೀಕ್ಷೆ:
ಮಾರ್ಚ್ 3 ನೇ ವಾರದವರೆಗೆ ಗರಿಷ್ಠ ಉಷ್ಣಾಂಶ ಹೀಗೆ ಮುಂದುವರಿಯಲಿದೆ. ಕರಾವಳಿಯಲ್ಲಿ ವಾಡಿಕೆ ಅಥವಾ ಅದಕ್ಕಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆ. ಬಳಿಕ ಪೂರ್ವ ಮುಂಗಾರು ಮಳೆ ನೀರಿಕ್ಷೆ ಇದೆ.