ಇನ್ನು ಮುಂದೆ ಎಂಎಸ್‌ಐಎಲ್ ಮುಖಾಂತರವೇ ಸರ್ಕಾರಿ ಅಧಿಕಾರಿಗಳು ಏರ್ ಟಿಕೆಟ್ ಬುಕ್ ಮಾಡುವಂತೆ ಸರ್ಕಾರದ ಆದೇಶ

ಇನ್ನು ಮುಂದೆ ಎಂಎಸ್‌ಐಎಲ್ ಮುಖಾಂತರವೇ ಸರ್ಕಾರಿ ಅಧಿಕಾರಿಗಳು ಏರ್ ಟಿಕೆಟ್ ಬುಕ್ ಮಾಡುವಂತೆ ಸರ್ಕಾರದ ಆದೇಶ

ಮೈಸೂರು: ಸರ್ಕಾರ ಎಲ್ಲಾ ಇಲಾಖೆಗಳು, ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಸಹಕಾರಿ ಸಂಸ್ಥೆಗಳ ಅಧೀನದಲ್ಲಿ ಬರುವ ಎಲ್ಲಾ ಅಧಿಕಾರಿಗಳು ಇನ್ನು ಮುಂದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಕೈಗೊಳ್ಳುವಾಗ ಕಡ್ಡಾಯವಾಗಿ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಮೂಲಕವೇ ಟಿಕೆಟ್ ಬುಕ್ಕಿಂಗ್ ಮಾಡುವಂತೆ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಹಿಂದೆಯೇ ಆದೇಶ ಹೊರಡಿಸಿದ್ದರು ಎಲ್ಲಾ ಇಲಾಖೆಗಳು, ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಸಹಕಾರಿ ಸಂಸ್ಥೆಗಳ ಅಧೀನದಲ್ಲಿ ಬರುವ ಎಲ್ಲಾ ಅಧಿಕಾರಿಗಳು ಖಾಸಗಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮೂಲಕ ಖರೀದಿಸುತ್ತಿದ್ದರು. ಆದರೆ ಎಂಎಸ್‌ಐಎಲ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಇದರ ಬೆಳವಣಿಗೆಗೂ ಅಧಿಕಾರಿಗಳು ಕೈಜೋಡಿಸಬೇಕು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಪಿ.ಹೇಮಲತಾ ತಿಳಿಸಿದ್ದಾರೆ.