ಮುಸ್ಲಿಂ ಸಂಘಟನೆಯಿಂದ ಶೈಕ್ಷಣಿಕ ಕಾರ್ಯಾಗಾರ ಹೆಸರಿನಲ್ಲಿ ಕೋಮು ಪ್ರಚೋದನೆ! ಸಿಡಿದೆದ್ದ ಹಿಂದು ಕಾರ್ಯಕರ್ತರು
ವಿಟ್ಲ (ದ.ಕ): ಅಡ್ಯನಡ್ಕ ಹಾಲ್ ಒಂದರಲ್ಲಿ ಮುಸಲ್ಮಾನ ಸಂಘಟನೆಯೊಂದು ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತ ಪ್ರವಚನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆ ಆರೋಪಿಸಿದ್ದು ಹಿಂದೂ ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿದ್ದಾರೆ.
ಕಾರ್ಯಕ್ರಮದ ಬ್ಯಾನರ್ ನಲ್ಲಿ ಮುಸ್ಲಿಂ ಸಂಘಟನೆಯ ಹೆಸರಿದ್ದ ಕಾರಣ ಹಾಗೂ ಕಾರ್ಯಕ್ರಮದಲ್ಲಿ ಮತಪ್ರವಚನದ ವಿರುದ್ಧ ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಸ್ಥಳಕ್ಕೆ ತೆರಳಿ, ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿದ್ದಾರೆ. ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಸಮವಸ್ತ್ರದೊಂದಿಗೆ ಹಾಜರಾಗಬೇಕೆಂದು ಮುಖ್ಯ ಶಿಕ್ಷಕರು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದೂ ಸಂಘಟನೆ ಈ ಪ್ರಕರಣದ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯ ಟಿ.ಆರ್.ನಾಯಕ್, ರಿಫೀಕ್ ಮಾಸ್ಟರ್ ಅತೂರು ಹಾಗೂ ನುಸ್ರುತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಸಂಘಟನೆ ಮೇಲೆ ದೂರು ದಾಖಲಾಗಿದೆ. ಪ್ರಕರಣದ ದಾಖಲಿಸಿಕೊಂಡ ವಿಟ್ಲ ಪೊಲೀಸರು ಇದೀಗ ತನಿಖೆಗೆ ಮುಂದಾಗಿದ್ದಾರೆ. ಹಿಂದು ಕಾರ್ಯಕರ್ತರು ಘಟನೆಯ ಬಗ್ಗೆ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.