ಹಾಸನ ಕ್ಷೇತ್ರದಿಂದ H.D ರೇವಣ್ಣ ಸ್ಪರ್ಧೆ ಕುರಿತು ಪ್ರೀತಂ ಗೌಡ ಹೇಳಿದ್ದೇನು..?

ಹಾಸನ : ಪಕ್ಷ ಹೇಳಿದ್ರೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ದ ಎಂದು ಹೆಚ್ .ಡಿ ರೇವಣ್ಣ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಇದೀಗ ಹಾಸನದ ಬಿಜೆಪಿ ಶಾಸಕ ಪ್ರೀತಮ್ ಗೌಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನನಗೆ ಗೊತ್ತಿಲ್ಲ, ಜೆಡಿಎಸ್ ಪಕ್ಷದ ಜೊತೆಗೆ ನನಗೆ ಸಖ್ಯ ಕಡಿಮೆ ಎಂದು ಲೇವಡಿ ಮಾಡಿದ್ದಾರೆ
ಜೆಡಿಎಸ್ ನಿಂದ ಅಂತಿಮವಾಗಿ ಯಾರಾದರೂ ಒಬ್ಬರು ಅಭ್ಯರ್ಥಿಯಂತು ಆಗಲೇಬೇಕು.. ಹೆಚ್.ಡಿ.ರೇವಣ್ಣ, ಭವಾನಿ ಅಥವಾ ಸ್ವರೂಪ್ ಯಾರಾದರೊಬ್ಬರು ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಾರೆ. ಅಲ್ಲಿಯವರೆಗೆ ಯಾಕೆ ಇದರ ಬಗ್ಗೆ ಸುಮ್ಮನೆ ಚರ್ಚೆ ಮಾಡಬೇಕು, ಅದನ್ನು ಬಿಟ್ಟು ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಎಂದರು.