ಧರ್ಮವನ್ನೆ ಅಪಹಾಸ್ಯ ಮಾಡುವವರನ್ನ ಮನುಷ್ಯ ಅಂತಲೆ ನಾನು ಅಂದುಕೊಳ್ಳಲ್ಲ: ಸದಾನಂದಗೌಡ

ಧರ್ಮವನ್ನೆ ಅಪಹಾಸ್ಯ ಮಾಡುವವರನ್ನ ಮನುಷ್ಯ ಅಂತಲೆ ನಾನು ಅಂದುಕೊಳ್ಳಲ್ಲ: ಸದಾನಂದಗೌಡ

ಬೆಂಗಳೂರು: ಹಿಂದೂ ಪದದ ಬಗ್ಗೆ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಮಾಜಿ‌ ಕೇಂದ್ರ ಸಚಿವ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣ ಆವರಣದಲ್ಲಿ ಮಾತನಾಡಿದ ಅವರು, ತಾನು ಹುಟ್ಟಿದ ಧರ್ಮವನ್ನೆ ಅಪಹಾಸ್ಯ ಮಾಡುವವರನ್ನ ಮನುಷ್ಯ ಅಂತಲೆ ನಾನು ಅಂದುಕೊಳ್ಳಲ್ಲ.

ಭಾರತ ದೇಶ ಅಂದ್ರೆ ಅದು ಹಿಂದೂ ರಾಷ್ಟ್ರ ಅಂತ ಹಿಂದಿನಿಂದಲೂ ಹೇಳ್ತಾರೆ. ಹಿಂದೂ ರಾಷ್ಟ್ರದಲ್ಲಿ ಹುಟ್ಟಿ, ಬೆಳೆದು,

ಗಾಳಿ ಆಹಾರ ಸೇವನೆ ಮಾಡಿ ಈ ರೀತಿ‌ ಮಾತನಾಡಲು ನಾಚಿಕೆಯಾಗಬೇಕು. ಕಾಂಗ್ರೇಸ್ ಅವರು ನಾವು ಭಾರಿ ದೇಶ ಭಕ್ತರು ಸ್ವಾತಂತ್ರ್ಯ ತಂದವರು ಅಂತಾರಲ್ಲ. ಅವರಿಗೆ ಮಾನ ಮರ್ಯಾದೆ ಇದ್ದರೆ ಕೂಡಲೆ ಅವರನ್ನ ಪಕ್ಷದಿಂದ ಕಿತ್ತು ಬಿಸಾಕಬೇಕು. ಸತೀಶ್ ಜಾರಕಿಹೋಳಿ ಅವರು ಸಾರ್ವಜನಿಕ ಜೀವನದಲ್ಲಿ ಇರಲು‌ ಯೋಗ್ಯರಲ್ಲ ಅನ್ನೂ ಭಾವನೆ ನನ್ನದು. ಅವರು ಸಾರ್ವಜನಿಕವಾಗಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಸದಾನಂದಗೌಡರು ಆಗ್ರಹಿಸಿದ್ದಾರೆ.