ಬೆಳಗಾವಿ-ಶಬರಿಮಲೆ ವಿಶೇಷ ರೈಲು, ವೇಳಾಪಟ್ಟಿ

ಬೆಳಗಾವಿ-ಶಬರಿಮಲೆ ವಿಶೇಷ ರೈಲು, ವೇಳಾಪಟ್ಟಿ

ಬೆಳಗಾವಿ;   ನವೆಂಬರ್ 13; ನೈಋತ್ಯ ರೈಲ್ವೆ ಪ್ರಯಾಣಿಕರ ಬೇಡಿಕೆಯಂತೆ

ಯಿಂದ ಶಬರಿಮಲೆಗೆ ವಿಶೇಷ ರೈಲು ಓಡಿಸುತ್ತಿದೆ.

ಇದರಿಂದಾಗಿ ಶಬರಿಮಲೆ ದೇವಾಲಯಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗಲಿದೆ.

ರೈಲು ನಂಬರ್  ಬೆಳಗಾವಿ-ಕೊಲ್ಲಂ ಜಂಕ್ಷನ್-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಪ್ರಕಟಿಸಿದೆ.ಬೆಳಗಾವಿಯಿಂದ ನವೆಂಬರ್ 20ರಂದು ರೈಲು ಹೊರಡಲಿದೆ. ಕೊಲ್ಲಂ ಜಂಕ್ಷನ್‌ನಿಂದ ನವೆಂಬರ್ 21ರಂದು ಹೊರಡಲಿದೆ. ಈ ರೈಲು ಒಂದು ಟ್ರಿಪ್ ಮಾತ್ರ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.ರೈಲು ನಂಬರ್ 07357 ಬೆಳಗಾವಿಯಿಂದ ನವೆಂಬರ್‌ 20ರ ಭಾನುವಾರ 11.10ಕ್ಕೆ ಹೊರಡಲಿದೆ. ಕೊಲ್ಲಂ ಜಂಕ್ಷನ್‌ ಅನ್ನು ಸೋಮವಾರ ಮಧ್ಯಾಹ್ನ 3.15ಕ್ಕೆ ತಲುಪಲಿದೆ.

ವಾಪಸ್ ಬರುವ ಮಾರ್ಗದಲ್ಲಿ ರೈಲು ನಂಬರ್ 07358 ಕೊಲ್ಲಂ ಜಂಕ್ಷನ್‌ನಿಂದ ಸೋಮವಾರ 5.10ಕ್ಕೆ ಹೊರಡಲಿದೆ. ಬೆಳಗಾವಿಗೆ ಮಂಗಳವಾರ 11 ಗಂಟೆಗೆ ಆಗಮಿಸಲಿದೆ.

ಈ ವಿಶೇಷ ರೈಲಿನಲ್ಲಿ 8 3 ಟೈರ್‌ ಎಸಿ ಕೋಚ್, 9 3 ಟೈರ್ ಸ್ಲೀಪರ್‌, 1 ಎಸಿ 2 ಟೈರ್ ಮತ್ತು ಲಗೇಜ್ ಮತ್ತು ಜನರೇಟರ್ ಕಾರ್ ಹೊಂದಿದೆ.