ಪೀಣ್ಯ ಎಕ್ಸ್ ಪ್ರೆಸ್ ಖ್ಯಾತಿಯ 'ಕನ್ನಡಿಗ ಅಭಿಮನ್ಯು ಮಿಥುನ್' ಪ್ರಥಮ ದರ್ಜೆ ಕ್ರಿಕೆಟಿಗೆ ನಿವೃತ್ತಿ ಘೋಷಣೆ

ಪೀಣ್ಯ ಎಕ್ಸ್ ಪ್ರೆಸ್ ಖ್ಯಾತಿಯ 'ಕನ್ನಡಿಗ ಅಭಿಮನ್ಯು ಮಿಥುನ್' ಪ್ರಥಮ ದರ್ಜೆ ಕ್ರಿಕೆಟಿಗೆ ನಿವೃತ್ತಿ ಘೋಷಣೆ

ಬೆಂಗಳೂರು: ಭಾರತ ಕ್ರಿಕೆಟ್ ತಂಡದಲ್ಲಿ ವೇಗದ ಬೌಲರ್ ಎಂದು ಹಾಗೂ ಪೀಣ್ಯ ಎಕ್ಸ್ ಪ್ರೆಸ್ ಖ್ಯಾತಿಯನ್ನು ಗಳಿಸಿರುವಂತ ಕನ್ನಡಿಗ ಅಭಿಮನ್ಯು ಮಿಥುನ್ ಅವರು, ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವಂತ ಅವರು, ನಾನು ದೇಶಕ್ಕಾಗಿ ಆಡಿದ್ದು ಖುಷಿ, ಸಂತಸ ತಂದಿದೆ. ನನ್ನ ಪ್ರಥಮ ದರ್ಜೆ ಕ್ರಿಕೆಟ್ ಗೆ ಇದೀಗ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ. ನನಗೆ ಕ್ರಿಕೆಟ್ ಆಡಲು ಅವಕಾಶ ಮಾಡಿಕೊಟ್ಟಂತ ಬಿಬಿಸಿಐ, ನನ್ನ ಕ್ರಿಕೆಟ್ ಜೀವನ ರೂಪಿಸಿದಂತ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಗೆ ಧನ್ಯವಾದ ಎಂಬುದಾಗಿ ತಿಳಿಸಿದ್ದಾರೆ.

ಅಂದಹಾಗೇ ಕನ್ನಡಿಗ, ಪೀಣ್ಯ ಎಕ್ಸ್ ಪ್ರೆಸ್ ಖ್ಯಾತಿಯ ಮಿಥುನ್ 2010 ಮತ್ತು 2011ನೇ ಸಾಲಿನಲ್ಲಿ ಭಾರತ ತಂಡದ ಪರ 4 ಟೆಸ್ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 9 ವಿಕೆಟ್, 5 ಏಕ ದಿನ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ.

ಮಿಥುನ್ ರಾಷ್ಟ್ರೀಯ ತಂಡಕ್ಕಿಂತ ಹೆಚ್ಚು ಕರ್ನಾಟಕ ರಾಜ್ಯ ತಂಡದಲ್ಲಿ ಆಡಿದ್ದಾರೆ. ಇದಲ್ಲದೇ ವೇಗದ ಬೌಲರ್ ಎಂಬುದಾಗಿಯೂ ಕೀರ್ತಿ ಗಳಿಸಿದ್ದಾರೆ. ಕಳೆದ 12 ವರ್ಷಗಳಿಂದ ರಾಜ್ಯ ತಂಡದ ಪ್ರಮುಖ ವೇಗಿಯಾಗಿ ಗುರ್ತಿಸಿಕೊಂಡಿದ್ದಂತ ಮಿಥುನ್, 2013-14, 2014-15ನೇ ಸಾಲಿನಲ್ಲಿ ಕರ್ನಾಟಕ ತಂಡ ರಣಜಿ, ಇರಾನಿ ಮತ್ತು ವಿಜಯ ಹಜಾರಿ ಟ್ರೋಫಿ ಗೆಲ್ಲಲು ಇವರು ಸಹಕಾರಿಯಾಗಿದ್ದಾರೆ.

ಒಟ್ಟು 103 ಪ್ರಥಮ ದರ್ಜೆ ಪ್ರಂದ್ಯಗಳಲ್ಲಿ 338 ವಿಕೆಟ್, 96 ಲಿಸ್ಟ್ ಎ ಪಂದ್ಯಗಳಲ್ಲಿ 136 ವಿಕೆಟ್ ಹಾಗೂ 74 ಟಿ20 ಪಂದ್ಯಗಳಲ್ಲಿ 69 ವಿಕೆಟ್ ಪಡೆದಿದ್ದರು. ಐಪಿಎಲ್ ನಲ್ಲಿ ಆರ್ ಸಿಬಿ, ಮುಂಬೈ ಮತ್ತು ಹೈದರಾಬಾದ್ ತಂಡದ ಪರ 19 ಪಂದ್ಯಗಳನ್ನು ಆಡಿರುವಂತ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ಮಿಥುನ್ ಇದೀಗ ಪ್ರಥಮ ದರ್ಜೆ ಕ್ರಿಕೆಟ್ ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.