ಶ್ರದ್ಧಾ ವಾಕರ್ ಕೊಲೆ ಆರೋಪಿ ಅಫ್ತಾಬ್ ಪೂನವಾಲಾ ಪ್ರಯಾಣಿಸುತ್ತಿದ್ದ ಪೊಲೀಸ್ ವ್ಯಾನ್ ದಾಳಿ
ನವದೆಹಲಿ:ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ಅವರ ಕಾರಿನ ಮೇಲೆ ದೆಹಲಿಯ ರೋಹಿಣಿಯಲ್ಲಿ ಸೋಮವಾರ (ನವೆಂಬರ್ 28) ದಾಳಿ ನಡೆದಿದೆ. ಪಾಲಿಗ್ರಾಫ್ ಪರೀಕ್ಷೆಯ ನಂತರ, ಎಫ್ಎಸ್ಎಲ್ ತಂಡವು ಅಫ್ತಾಬ್ನೊಂದಿಗೆ ಹೊರಬಂದಿತು. ಈ ವೇಳೆ ಆಸ್ಪತ್ರೆಗೆ ಹೊರಗೆ ಕೆಲವು ಜನರ ಗುಂಪು ಸ್ಥಳಕ್ಕೆ ತಲುಪಿ ವಾಹನದ ಮೇಲೆ ದಾಳಿ ಮಾಡಿತು.
ಆಗ ಒಬ್ಬ ವ್ಯಕ್ತಿ ಪೋಲೀಸನು ವ್ಯಾನಿನಿಂದ ಹೊರಬಂದು ಈ ಜನರತ್ತ ಬಂದೂಕನ್ನು ತೋರಿ ಗಾಳಿಯಲ್ಲಿ ಗುಂಡಿನ ದಾಳಿ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಉದ್ರಿಕ್ತ ಗುಂಪು ಪೊಲೀಸ್ ವ್ಯಾನ್ ಮೇಲೆ ಕಲ್ಲು ತೂರಾಟ ನಡೆಸಿದೆ. ಎರಡು ನಿಮಿಷಗಳ ಕಾಲ ಅವನನ್ನು ಹೊರಗೆ ಬಿಡಿ ನಾನು ಅವನನ್ನು ಕೊಲ್ಲುತ್ತೇನೆ ಎಂದು ದಾಳಿಕೋರರು ತಿಳಿಸಿದ್ದಾರೆ ಎನ್ನಲಾಗಿದೆ.