ಜೆಡಿಎಸ್ ನಲ್ಲೇ ಉಳಿಯಲು ಜಿ.ಟಿ.ದೇವೇಗೌಡ ಹಾಕಿದ 3 ಷರತ್ತುಗಳು?

ಜೆಡಿಎಸ್ ನಲ್ಲೇ ಉಳಿಯಲು ಜಿ.ಟಿ.ದೇವೇಗೌಡ ಹಾಕಿದ 3 ಷರತ್ತುಗಳು?

ಇನ್ನೇನು ಹದಿನೇಳು-ಹದಿನೆಂಟು ತಿಂಗಳಲ್ಲಿ ನಡೆಯಬೇಕಾಗಿರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಜಾತ್ಯಾತೀತ ಜನತಾದಳ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು ಬರುತ್ತಿದೆ. ದೇವೇಗೌಡ್ರು ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಸಾಲುಸಾಲು ಸಭೆಗಳನ್ನು ನಡೆಸುತ್ತಿದ್ದಾರೆ.

ಕಾರ್ಯಕರ್ತರ, ಬೂತ್ ಮಟ್ಟದ ನಾಯಕರ ಸಭೆಯನ್ನು ನಡೆಸುತ್ತಿರುವ ಕುಮಾರಸ್ವಾಮಿ, ಪಕ್ಷದಲ್ಲಿದ್ದು ಪಕ್ಷದ ಪರವಾಗಿ ಕೆಲಸ ಮಾಡದೇ ಇರುತ್ತಿರುವ ನಾಯಕರ ಬಗ್ಗೆ ಗರಂ ಆಗಿದ್ದಾರೆ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಿ, ಇಲ್ಲದಿದ್ದರೆ ಉತ್ಸಾಹೀ ಯುವಕರನ್ನು ಮುನ್ನಲೆಗೆ ತರುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಪಕ್ಷದಲ್ಲಿದ್ದರೂ ಪಕ್ಷದ ವಿರುದ್ದವಾಗಿ ಕೆಲಸ ಮಾಡುತ್ತಿರುವವರನ್ನು ನಿರ್ದಾಕ್ಷಿಣ್ಯವಾಗಿ ಉಚ್ಚಾಟಿಸಲಾಗುವುದು ಎಂದು ಜೆಡಿಎಸ್ ವರಿಷ್ಠ ದೇವೇಗೌಡ್ರು ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಪರೋಕ್ಷವಾಗಿ ಕೋಲಾರದ ಜೆಡಿಎಸ್ ಮುಖಂಡರಿಗೆ ನೀಡಿದ ಎಚ್ಚರಿಕೆಯಾಗಿತ್ತು.

ಅದೇ ರೀತಿ, ಮೈಸೂರು ಭಾಗದ ಪ್ರಭಾವಿ ನಾಯಕ ಮತ್ತು ಒಂದು ಕಾಲದಲ್ಲಿ ದೊಡ್ಡೇಗೌಡ್ರ ಪರಮಾಪ್ತರಾಗಿದ್ದ ಜಿ.ಟಿ.ದೇವೇಗೌಡ ಅವರು, ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ. ಆದರೆ, ಜೆಡಿಎಸ್ ಆಪ್ತಮೂಲಗಳ ಪ್ರಕಾರ, ಗೌಡ್ರಿಗೆ ಅವರು ಪಕ್ಷ ಬಿಟ್ಟು ಹೋಗುವುದು ಇಷ್ಟವಿಲ್ಲ. ಹಾಗಾಗಿ, ಅವರ ಜೊತೆ, ಗಣೇಶ ಹಬ್ಬದ ಮುನ್ನಾದಿನ ಇನ್ನೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ವೇಳೆ, ಜಿಟಿಡಿ ಮೂರು ಷರತ್ತನ್ನು ಇಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.