ರಾಜಸ್ಥಾನದಲ್ಲಿ ಒಂದೇ ಬಾರಿಗೆ 19 ಹೊಸ ಜಿಲ್ಲೆಗಳ ರಚನೆ

ರಾಜಸ್ಥಾನದಲ್ಲಿ ಒಂದೇ ಬಾರಿಗೆ 19 ಹೊಸ ಜಿಲ್ಲೆಗಳ ರಚನೆ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಶುಕ್ರವಾರ 19 ಹೊಸ ಜಿಲ್ಲೆಗಳನ್ನು ರಚಿಸಿದ್ದಾರೆ. ಜತೆಗೆ ರಾಜ್ಯವನ್ನು ಮೂರು ವಿಭಾಗಗಳನ್ನಾಗಿ ಗುರುತಿಸಲಾಗಿದೆ.

ಹೊಸ ಜಿಲ್ಲೆಗಳು: ಅನೂಪ್‌ಗಢ, ಬಲೋತ್ರಾ, ಬೇವಾರ್, ದೀಗ್, ದಿದ್ವಾನಾ-ಕುಚಮನ್ ನಗರ, ದುಡು, ಗಂಗಾಪುರ ನಗರ, ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ, ಕೇಕ್ರಿ, ಕೊಟ್‌ಪುಟ್ಲಿ, ಖೈರ್ತಾಲ್, ನೀಮ್ಕಥಾನ, ಫಲೋಡಿ, ಸಾಲುಂಬರ್, ಸಂಚೋರ್, ಶಹಪುರ (ಭಿಲ್ವಾರ).

ಈ ಹೊಸ 19 ಜಿಲ್ಲೆಗಳೊಂದಿಗೆ ರಾಜಸ್ಥಾನದ ಒಟ್ಟು ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹೇಳಿದರು.

ಇನ್ನು ರಾಜಸ್ಥಾನವನ್ನು ಬನ್‌ಸ್ವಾರಾ, ಪಾಲಿ, ಸಿಕಾರ್ ಎಂದು ಮೂರು ವಿಭಾಗಗಳಾಗಿ ಗುರುತಿಸಲಾಗಿದೆ.