ಕಹಿ ಘಟನೆ ಮರೆತು ದರ್ಶನ್ ಪರ ನಿಂತ ನಟ ಜಗ್ಗೇಶ್

ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಘಟನೆಯನ್ನು ನಟ ಜಗ್ಗೇಶ್ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ, ತಾವು ಕಲಾವಿದನಿಗೆ ಬೆಂಬಲವಾಗಿ ನಿಂತುಕೊಳ್ಳುವುದಾಗಿ ಹೇಳಿದ್ದಾರೆ. ತಮ್ಮೊಂದಿಗೆ ನಡೆದ ಕಹಿ ಘಟನೆ ಮರೆತು ಜಗ್ಗೇಶ್, ದರ್ಶನ್ ಗೆ ಬೆಂಬಲ ನೀಡಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಕಳೆದ ವರ್ಷ ದರ್ಶನ್ ಅಭಿಮಾನಿಗಳು ಜಗ್ಗೇಶ್ ನಟಿಸುತ್ತಿದ್ದ ಸಿನಿಮಾದ ಶೂಟಿಂಗ್ ಸೆಟ್ ಗೆ ತೆರಳಿ ಜಗ್ಗೇಶ್ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದರು. ಅದನ್ನು ಮರೆತು ಜಗ್ಗೇಶ್ ಈಗ ದಾಸನ ನೆರವಿಗೆ ನಿಂತಿದ್ದಾರೆ.