ಕಮಲ್ ನಟನೆಯ 'ವಿಕ್ರಮ್' ಸಿನಿಮಾದಲ್ಲಿ ಕಿಚ್ಚ ಸುದೀಪ್? ಈ ಪ್ರಶ್ನೆಗೆ ಸಿಕ್ತು ಉತ್ತರ
ಬಹುಭಾಷಾ ನಟ ಕಮಲ್ ಹಾಸನ್ (Kamal Hassan) ನಟನೆಯ 'ವಿಕ್ರಮ್' (Vikram) ಸಿನಿಮಾ ಟೈಟಲ್ ಟೀಸರ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಇತ್ತೀಚೆಗ ರಿಲೀಸ್ ಆಗಿರುವ ಚಿತ್ರದ ಹೊಸ ಪೋಸ್ಟರ್ ಕುತೂಹಲವನ್ನು ದುಪಟ್ಟು ಮಾಡಿತ್ತು. ಇದನ್ನು ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ (Kichcha Sudeep) ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ವಿಜಯ್ ಸೇತುಪತಿ ಅವರು ಸ್ಪಷ್ಟನೆ ನೀಡಿದ್ದಾರೆ.
ವಿಜಯ್ ಸೇತುಪತಿ ಜುಲೈ 12ರಂದು ಮಾಸ್ಟರ್ ಚೆಫ್ ಹೆಸರಿನ ತಮಿಳಿನ ರಿಯಾಲಿಟಿ ಶೋ ಗೆ ಚಾಲನೆ ನೀಡಿದ್ದಾರೆ. ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇದಕ್ಕೆ ಚಾಲನೆ ನೀಡಿದ್ದು, ಈ ವೇಳೆ ಅವರು ಸುದೀಪ್ ಬಗ್ಗೆ ಕೇಳಿ ಬಂದ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ್ದೇನು ಎನ್ನುವುದು ವಿಡಿಯೋದಲ್ಲಿದೆ.