ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಏಕೆ ಎನ್ನುವುದು ಈಗ ತಿಳಿಯುತ್ತಿದೆ: ಹರ್ದೀಪ್ ಸಿಂಗ್ ಪುರಿ

ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಏಕೆ ಎನ್ನುವುದು ಈಗ ತಿಳಿಯುತ್ತಿದೆ: ಹರ್ದೀಪ್ ಸಿಂಗ್ ಪುರಿ

ನವ ದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಏಕೆ ಎನ್ನುವುದು ನಿಖರವಾಗಿ ಈಗ ತಿಳಿದು ಬರುತ್ತಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಮೂಲ ಭಾರತೀಯರನ್ನು ಭಾರತಕ್ಕೆ ಕರೆತರುತ್ತಿರುವ ಪ್ರಯತ್ನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರಿಗೆ ಒತ್ತು ನೀಡುತ್ತಾ, ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತ ತನ್ನ ಮೂಲ ದೇಶವಾಸಿಗಳನ್ನು ಸ್ಥಳಾಂತರ ಮಾಡುತ್ತಿದೆ.

ಈ ಬಗ್ಗೆ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಟ್ವೀಟ್ ಮಾಡಿದ ಅವರು, 'ನಮ್ಮ ನೆರೆರಾಷ್ಟ್ರಗಳ ಇತ್ತೀಚಿನ ಬೆಳವಣಿಗೆಗಳಿಂದಾಗಿ ಸಿಖ್ಖರು ಮತ್ತು ಹಿಂದೂಗಳು ಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಸಂದರ್ಭವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಏಕೆ ಅಗತ್ಯ ಎಂಬುದನ್ನು ಸ್ಪಷ್ಟವಾಗಿ ಕಾಣಿಸುತ್ತದೆ' ಎಂದಿದ್ದಾರೆ.

2019ರಲ್ಲಿ ಸಿಎಎ ಕಾಯ್ದೆಯನ್ನು ಅಂಗೀಕರಿಸಿದಾಗ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಗಲಭೆಯಲ್ಲಿ ಸುಮಾರು 100 ಮಂದಿ ಸಾವನ್ನಪ್ಪಿದ್ದರು.

2015ಕ್ಕೂ ಮುನ್ನ ಭಾರತಕ್ಕೆ ಬಂದ ನೆರೆಹೊರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳ ಕಿರುಕುಳಕ್ಕೊಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಈ ಕಾನೂನು ಪೌರತ್ವವನ್ನು ಒದಗಿಸುತ್ತದೆ.

2019 ರಲ್ಲಿ ಅಂಗೀಕರಿಸಲ್ಪಟ್ಟು, ಜನವರಿ 10, 2020 ರಲ್ಲಿ ಜಾರಿಗೆ ಬಂದಿತು.ಅಫ್ಗಾನಿಸ್ತಾನ ಬಿಕ್ಕಟ್ಟನ್ನು ಸೂಕ್ಷ್ಮವವಾಗಿ ಪರಿಶೀಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, 'ಆಫ್ಗಾನ್ ಸಹೋದರರು ಮತ್ತು ಸಹೋದರಿಯರಿಗೆ' ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ವಿಶೇಷವಾಗಿ ಆಶ್ರಯವನ್ನು ಎದುರು ನೋಡುತ್ತಿರುವ ಸಿಖ್