ಕುಮಾರಸ್ವಾಮಿಗೆ ಅಭದ್ರತೆ ಕಾಡುತ್ತಿದೆ: ಸಿ.ಪಿ.ಯೋಗೇಶ್ವರ್ ವಾಗ್ದಾಳಿ

ಕುಮಾರಸ್ವಾಮಿಗೆ ಅಭದ್ರತೆ ಕಾಡುತ್ತಿದೆ: ಸಿ.ಪಿ.ಯೋಗೇಶ್ವರ್ ವಾಗ್ದಾಳಿ

ರಾಮನಗರ: ಬ್ರಾಹ್ಮಣ ಸಮುದಾಯದ ಬಗ್ಗೆ ಹೆಚ್‌ಡಿಕೆ ಹೇಳಿಕೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಿಡಿಕಾರಿದ್ದಾರೆ.

ಇದೀಗ ಕುಮಾರಸ್ವಾಮಿಗೆ ಅಭದ್ರತೆ ಕಾಡುತ್ತಿದೆ.

ಹೀಗಾಗಿ ಒಕ್ಕಲಿಗರನ್ನು ಓಲೈಸಲು ಸಲುವಾಗಿ ಬೇರೆ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಸ್ವಾಭಿಮಾನಿ ಸಂಕಲ್ಪ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಕ್ಕಲಿಗರನ್ನು ಓಲೈಸುವುದಕ್ಕಾಗಿ ಬೇರೆ ಸಮುದಾಯಗಳನ್ನು ಕುಮಾರಸ್ವಾಮಿ ಒಡೆಯುತ್ತಿದ್ದಾರೆ.ಇದು ಹೆಚ್ಚು ದಿನಗಳ ಕಾಲ ನಡೆಯುವುದಿಲ್ಲ.ಆದರೆ ಈಗ ಜನ ಅರ್ಥ ಮಾಡಿಕೊಂಡಿದ್ದಾರೆ. ಈ ರೀತಿಯ ದ್ವೇಷದ ರಾಜಕಾರಣದಿಂದ ಏನೂ ಪ್ರಯೋಜನ ಆಗಲ್ಲ ಎಂದು ತಿರುಗೇಟು ನೀಡಿದರು‌.

ಪ್ರಹ್ಲಾದ್‌ ಜೋಶಿ ಸಿಎಂ ಮಾಡಲು ಆರ್‌ ಎಸ್‌ ಎಸ್‌ ಹುನ್ನಾರ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಬಿಜೆಪಿಯಲ್ಲಿ ಯಾರು ಬೇಕಾದ್ರೂ ಸಿಎಂ ಆಗ್ತಾರೆ. ನಮ್ಮದು ರಾಷ್ಟ್ರೀಯ ಪಕ್ಷ ನಮಗೆ ಬಹುಮತ ಬಂದಾಗ ಯಾರು ಸಿಎಂ ಅಂತ ವರಿಷ್ಠರು ತೀರ್ಮಾನ ಮಾಡುತ್ತಾರೆ. ಜೋಶಿ ಯಾಕೆ ಸಿಎಂ ಆಗಬಾರದು. ಅವರು ಈಗಾಗಲೇ ಕೇಂದ್ರ ಸಚಿವರಾಗಿದ್ದಾರೆ. ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.