ರೊನಾಲ್ಡೋ ಲೈಕ್ ಮಾಡಿದ ಕಮೆಂಟ್ ಈಗ ಫುಲ್ ವೈರಲ್
ದಾಖಲೆಯ ಏಳನೇ ಬಾರಿಗೆ ಪ್ರತಿಷ್ಠಿತ ಬಲಾನ್ ಡಿ'ಓರ್ ಗೌರವಕ್ಕೆ ಭಾಜನರಾದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಈ ಸ್ಫರ್ಧೆಯಲ್ಲಿ ಮತ್ತೊಮ್ಮೆ ಕ್ರಿಶ್ಚಿಯಾನೋ ರೊನಾಲ್ಡೋ, ಕರೀಂ ಬೆಂಜ಼ೆಮಾ, ಜೊರ್ಗಿನ್ಹೋ ಹಾಗೂ ರಾಬರ್ಟ್ ಲೆವಾನ್‌ಡೋಸ್ಕಿರನ್ನು ಹಿಂದಿಕ್ಕಿದ್ದಾರೆ.
ಪ್ಯಾರಿಸ್ ಸೇಂಟ್ ಜರ್ಮೇಯ್ನ್ ತಾರೆಗೆ ನಿರಂತರವಾಗಿ ಈ ಗೌರವ ಒಲಿದು ಬರುತ್ತಿರುವ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಟಗಾರರ ಅಭಿಮಾನಿಗಳ ನಡುವೆ ಪರ/ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ.
"ರೊನಾಲ್ಡೋ ಹಾಗೂ ಲೆವಾಂಡೋಸ್ಕೀರಿಂದ ದಾಖಲೆಯ ಏಳನೇ ಬಾರಿಗೆ ಮೆಸ್ಸಿ ಚಿನ್ನದ ಚೆಂಡನ್ನು ಕಸಿದುಕೊಂಡಿದ್ದಾರೆ," ಎನ್ನುವ ಪೋಸ್ಟ್ ಒಂದಕ್ಕೆ ಖುದ್ದು ಕ್ರಿಶ್ಚಿಯಾನೋ ರೊನಾಲ್ಡೋ ಥಂಬ್ಸ್‌ಅಪ್ ನೀಡಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ಸೂಪರ್‌ಸ್ಟಾರ್ ಲೈಕ್ ಮಾಡಿದ ಈ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋರ್ಚುಗಲ್‌ನ ಫುಟ್ಬಾಲ್ ತಾರೆ ಮಾಡಿರುವ ದಾಖಲೆಗಳ ವಿವರಗಳನ್ನು ಪಟ್ಟಿ ಮಾಡಿರುವ ಈ ಅಭಿಮಾನಿ ತನ್ನ ಮೆಚ್ಚಿನ ತಾರೆಗೇಕೆ ಆ ಗೌರವ ಹೀಗೆ ಸತಾಯಿಸುತ್ತಿದೆ ಎಂದು ಕೇಳಿದ್ದಾರೆ.
ರೊನಾಲ್ಡೋ ಜೊತೆಗೆ ಆಟದ ಮೈದಾನದಲ್ಲಿ ತೀವ್ರ ಪೈಪೋಟಿ ಹೊಂದಿರುವ ಮೆಸ್ಸಿ ಬಲಾನ್ ಡಿ'ಓರ್ ಅನ್ನು 2009, 2010, 2011, 2012, 2015 ಹಾಗೂ 2019ರಲ್ಲಿ ಜಯಿಸಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ರಿಯಲ್ ಮ್ಯಾಡ್ರಿಡ್ ಆಟಗಾರನಾಗಿ ರೊನಾಲ್ಡೋ ಈ ಗೌರವಕ್ಕೆ ಐದು ಬಾರಿ ಭಾಜನರಾಗಿದ್ದಾರೆ.
ಕೋಪಾ ಅಮೆರಿಕಾದಲ್ಲಿ ಅರ್ಜೆಂಟೀನಾ ಪರ ನೀಡಿದ ಪ್ರದರ್ಶನದ ಬೆನ್ನಿಗೆ ಮೆಸ್ಸಿಗೆ ದಾಖಲೆಯ ಏಳನೇ ಬಾರಿಗೆ ಈ ಪ್ರಶಸ್ತಿ ಒಲಿದುಬಂದಿದೆ