3 ಕೋಟಿಗೂ ಹೆಚ್ಚು ಹಣ ವಂಚಿಸಿದ ಸೆಕ್ಯೂರ್ ವ್ಯಾಲ್ಯೂ ಕಂಪನಿ ಗುತ್ತಿಗೆ ನೌಕರರ ಬಂಧನ
ಕೋಲಾರ
ಸೆಕ್ಯೂರ್ ವ್ಯಾಲ್ಯೂ ಕಂಪನಿ ಗುತ್ತಿಗೆ ನೌಕರರ ಬಂಧನ
ಎಟಿಎಂಗಳಿಗೆ ಹಣ ತುಂಬುವ ನೌಕರರು 3 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಮೂಲದ ಗಂಗಾಧರ್, ಸುನೀಲ್ ಕುಮಾರ್, ಪವನ್ ಕುಮಾರ್, ಮುರಳಿ ಎಂಬುವರು ಎಟಿಎಂಗೆ ಹಣ ತುಂಬದೆ ವೈಯಕ್ತಿಕವಾಗಿ ಬಳಸಿಕೊಂಡು ವಂಚನೆಗೈದಿರುವ ಬಗ್ಗೆ ಸೆಕ್ಯೂರ್ ವ್ಯಾಲ್ಯೂ ಕಂಪನಿಯು ಸಿಇಎನ್ ಪೆÇಲೀಸ್ ಠಾಣೆಗೆ ದೂರು ದಾಖಲಿಸಿದೆ. ಈ ನಾಲ್ವರು ಆಕ್ಸಿಸ್, ಎಸ್‍ಬಿಐ, ಎಚ್‍ಡಿಎಫ್‍ಸಿ, ಐಸಿಐಸಿಐ, ಯುಬಿಐ, ಇಂಡಿಯನ್ ಬ್ಯಾಂಕ್ ಸೇರಿದಂತೆ ಇತರೆ ಎಟಿಎಂಗಳಿಗೆ ಹಣ ತುಂಬುವ ಸೆಕ್ಯೂರ್ ವ್ಯಾಲ್ಯೂ ಎಂಬ ಖಾಸಗಿ ಕಂಪನಿಯಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಕಂಪನಿ ಆಡಿಟ್ ಮಾಡುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಎಸ್‍ಪಿ ಡೆಕ್ಕ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆ ಹಚ್ಚಲಾಗಿದ್ದು, ಮತ್ತೊರ್ವ ಪ್ರಮುಖ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.