ಮತದಾರರು ಎ ಒನ್, ನಾವು ಎ ಒನ್ ಲಖನ್ ಜಾರಕಿಹೊಳಿ | Belagavi |
ವಿರೋಧಿಗಳು ಅಪಪ್ರಚಾರ ಮಾಡುತ್ತಲೇ ಇರುತ್ತದೆ ಅದಕ್ಕೆ ತೆಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ನಾನು ಎ ಟೀಮ್ ನಮ್ಮ ವಿರೋಧಿಗಳೇ ಬಿ ಟೀಮ್ ಎಂದು ಲಖನ್ ಜಾರಕಿಹೊಳಿ ಹೇಳಿದರು. ಅವರು, ಸುಳೆಭಾವಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿ, ಮತದಾರರು ಎ ಒನ್. ನಾವು ಎ ಒನ್ ಎಂದು ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರು.ವಿರೋಧಿಗಳ ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ, ಚುನಾವಣೆಯಲ್ಲಿ ಕಾಲಿಗೆ ಬೀಳುತ್ತಾರೆ ನಂತರ ನಮ್ಮ ಗ್ರಾಪಂ ಸಮೀಪವು ಸುಳಿಯುವುದಿಲ್ಲ. ತಾವು ಜನರಿಂದ ಆಯ್ಕೆಯಾಗಿದ್ದಿರಿ, ನಿಮ್ಮಿಂದ ನಾನು ಜನಸೇವೆ ಮಾಡಲು ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ನನ್ನನ್ನು ಆಯ್ಕೆಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೃಷ್ಣಾ ಆನಗೋಳಕರ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ವಿವಿದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರುಗಳಾದ ಅಬಿದಾಬೇಗಂ ಸನದಿ, ಭಾಗ್ಯಶ್ರೀ ಹನಬರ, ಅಲ್ಲನ್ನ ನಾಯ್ಕ, ನಾಗಪ್ಪ ಕಾಲೆರಿ, ಅಲ್ಲಾವುದ್ದಿನ ಫನಿಬಂದ, ಬಸವರಾಜ ಮಾದಬನ್ನವರ, ಮಹೇಶ ಸುಗನೆನ್ನವರ, ರತ್ನವ್ವಾ ಕೊಲಕಾರ ಸೇರಿದಂತೆ ನೂರಾರು ಗ್ರಾಪಂ ಸದಸ್ಯರು ಇದ್ದರು.