ನಟಿ ರಂಭಾ ಕಾರು ಭೀಕರ ಅಪಘಾತ; ಮಗಳ ಸ್ಥಿತಿ ಗಂಭೀರ

ಬಹುಭಾಷಾ ನಟಿ ರಂಭಾ ಕಾರು ಅಪಘಾತಕ್ಕೀಡಾಗಿದ್ದು, ನಟಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಮಗಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಟಿ ರಂಭಾ ವಿವಾಹದ ಬಳಿಕ ವಿದೇಶದಲ್ಲಿ ವಾಸವಾಗಿದ್ದು, ಅಲ್ಲಿಯೇ ಅವರ ಕಾರು ಅಪಘಾತವಾಗಿದೆ.
ಮಕ್ಕಳನ್ನು ಶಾಲೆಯಿಂದ ಕರೆತರುತ್ತಿದ್ದಾಗ ತಮ್ಮ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ತಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಆದರೆ ಮಗಳು ಸಶಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಅಪಘಾತವಾಗುತ್ತಿದ್ದಂತೆ ಕಾರಿನ ಏರ್ ಬ್ಯಾಗ್ ತೆಗೆದುಕೊಂಡಿದ್ದರಿಂದ ದೊಡ್ಡಮಟ್ಟದ ತೊಂದರೆಯಾಗಿಲ್ಲ. ಕಾರು ಜಖಂಗೊಂಡಿದೆ. ಮಗಳು ಸಶಾ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ತಿಳಿಸಿದ್ದಾರೆ.