ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋ ರಿಕ್ಷಾ ನೀಡುವೆ : ಶಾಸಕ ವೇದವ್ಯಾಸ್ ಭರವಸೆ -
ಮಂಗಳೂರು,: ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಕಳೆದ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಮನೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋ ರಿಕ್ಷಾ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಎಆರ್ ಟಿಒ ಸ್ಥಳಕ್ಕೆ ಕರೆಯಿಸಿ ಪರ್ಮಿಟ್ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದರು. ಒಂದು ವಾರದೊಳಗೆ ಹೊಸ ರಿಕ್ಷಾ ದಾಖಲೆ ಸಮೇತ ನೀಡುವ ವ್ಯವಸ್ಥೆ ಆಗುವಂತೆ ಸೂಚಿಸಿದರು. ಆಟೋ ರಿಕ್ಷಾದ ವೆಚ್ಚ ತಾನೇ ಪಾವತಿಸುವುದಾಗಿ ಶಾಸಕರು ತಿಳಿಸಿದರು. ರಿಕ್ಷಾ ಜತೆಗೆ ಬಿಜೆಪಿ ವತಿಯಿಂದ ಐದು ಲಕ್ಷ ರೂ ನೀಡಲಾಗುವುದು. ಸರಕಾರದಿಂದ ಬರಬೇಕಾದ ಪರಿಹಾರವೂ ಶೀಘ್ರ ಬರುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.