ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ಮೇಲೆ ಡೆಲಿವರಿ ಬಾಯ್ನಿಂದ ಹಲ್ಲೆ
ನಗರದ ಸಂಪಿಗೆಹಳ್ಳಿ ಅಪಾರರ್ಟ್ಮೆಂಟ್ಗೆ ವಸ್ತುಗಳನ್ನು ಡೆಲಿವರಿ ಮಾಡಲು ಬಂದ ಯುವಕ ಸಕ್ಯೂರಿಟಿ ಗಾರ್ಡ್ ಮೇಲೆ ಹುಡುಗರನ್ನು ಕರೆಸಿ ಹಲ್ಲೆ ಮಾಡಿದ್ದಾನೆ.
ಬೆಂಗಳೂರು: ನಗರದ ಸಂಪಿಗೆಹಳ್ಳಿಯ ಅಪಾರ್ಟ್ಮೆಂಟ್ಗೆ ದಿನಸಿ ವಸ್ತು ಡೆಲಿವರಿ ಮಾಡಲು ಬಂದಿದ್ದ ಯುವಕ ವಾಪಸ್ ಹೋಗುವ ವೇಳೆ ಆತನ ಬ್ಯಾಗ್ ಪರಿಶೀಲಿಸಲು ಸೆಕ್ಯೂರಿಟಿ ಮುಂದಾಗಿದ್ದಾರೆ.
ಇದೇ ಕಾರಣಕ್ಕೆ ಸೆಕ್ಯೂರಿಟಿ ಜೊತೆ ಡೆಲಿವರಿ ಬಾಯ್ ಗಲಾಟೆ ಮಾಡಿದ್ದಾನೆ. ಬಳಿಕ ನಾಲ್ಕೈದು ಹುಡುಗರನ್ನು ಕರೆಯಿಸಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಸ್ಥಳೀಯರು ಸಂಪಿಗೆಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಹಲ್ಲೆ ನಡೆಸಿದ ಯುವಕರನ್ನು ಇದೀಗ ವಶಕ್ಕೆ ಪಡೆಯಲಾಗಿದೆ. ಸೆಕ್ಯೂರಿಟಿ ಮೇಲಿನ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಐವರು ಯುವಕರಿಂದ ಸೆಕ್ಯೂರಿಟಿಗಾರ್ಡ್ ಮೇಲೆ ಹಲ್ಲೆ: ಮೂವರು ಪೊಲೀಸ್ ವಶಕ್ಕೆ
ರಾಮನಗರ: ಐವರು ಯುವಕರಿಂದ ಸೆಕ್ಯೂರಿಟಿಗಾರ್ಡ್ ಮೇಲೆ ಮನಬಂದಂತೆ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಡ್ಯಾಂನಲ್ಲಿ ನಡೆದಿದೆ. ನರಸಿಂಹ ಹಲ್ಲೆಗೊಳಗಾದ ಸೆಕ್ಯೂರಿಟಿಗಾರ್ಡ್ ಆಗಿದ್ದು, ಜಲಾಶಯವನ್ನು ವೀಕ್ಷಿಸಲು ಐವರು ಯುವಕರು ಬಂದಿದ್ದಾರೆ. ಈ ವೇಳೆ ಡ್ಯಾಂ ಆವರಣಕ್ಕೆ ತೆರಳಲು ಸೆಕ್ಯೂರಿಟಿಗಾರ್ಡ್ ಅವಕಾಶ ನೀಡಿರಲಿಲ್ಲ. ಹಾಗಾಗಿ ಕುಪಿತಗೊಂಡು ಮೂಗು, ಕಿವಿಯಲ್ಲಿ ರಕ್ತ ಬರುವಂತೆ ಸೆಕ್ಯೂರಿಟಿಗಾರ್ಡ್ ನರಸಿಂಹ ಮೂರ್ತಿ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಅಷ್ಟೊತ್ತಿಗೆ ಮೂವರು ಯುವಕರನ್ನು ಹಿಡಿದು ಥಳಿಸಿ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೆಕ್ಯೂರಿಟಿಗಾರ್ಡ್ ಮೇಲೆ ಹಲ್ಲೆ ಬಳಿಕ ಇಬ್ಬರು ಯುವಕರು ಪರಾರಿ ಆಗಿದ್ದಾರೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.