ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ : ಮಾಣೆಕ್ ಷಾ ಮೈದಾನಕ್ಕೆ ಬರುವವರಿಗೆ ಮಾಸ್ಕ್‌ ಕಡ್ಡಾಯ, ಬಿಗಿ ಭದ್ರತೆ

ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ : ಮಾಣೆಕ್ ಷಾ ಮೈದಾನಕ್ಕೆ ಬರುವವರಿಗೆ ಮಾಸ್ಕ್‌ ಕಡ್ಡಾಯ, ಬಿಗಿ ಭದ್ರತೆ

ಬೆಂಗಳೂರು: ಇನ್ನೇನು ಗಣರಾಜೋತ್ಸವಕ್ಕೆ ಎರಡು ದಿನ ಬಾಕಿ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಗಣರಾಜೋತ್ಸವಕ್ಕೆ ಆಚರಣೆಗೆ ಭರ್ಜರಿ ಸಿದ್ಧತೆ ನಡೆಸಲಾಗಿದೆ.

ನಗರದ ಮಾಣೆಕ್ ಷಾ ಮೈದಾನದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಕಾರ್ಯಕ್ರಮ ಬರುವವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರಲ್ಲಿ ಭದ್ರತೆಗೆ 1,200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. 9 ಡಿಸಿಪಿ, 16 ಎಸಿಪಿ, 45 ಇನ್ಸ್​​ಪೆಕ್ಟರ್​ಗಳು, 101 ಪಿಎಸ್​​ಐ, 14 ಮಹಿಳಾ ಪಿಎಸ್​​ಐ, 83 ಎಎಸ್​ಐ, 577 ಹೆಡ್​​ ಕಾನ್ಸ್​​ಟೇಬಲ್ಸ್, 77 ಮಹಿಳಾ ಸಿಬ್ಬಂದಿ, ಮಫ್ತಿಯಲ್ಲಿ 172 ಪೊಲೀಸ್​ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಾಗೂ ಹೆಚ್ಚುವರಿ ಭದ್ರತೆಗೆ 10 KSRP ತುಕಡಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಮಾಣೆಕ್​ ಷಾ ಮೈದಾನದ ಸುತ್ತಮುತ್ತ 56 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.