ರಾಜ್ಯದಲ್ಲಿ ಸಿದ್ದರಾಮಯ್ಯಗೆ ಯಾವ ಕ್ಷೇತ್ರವೇ ಇಲ್ಲದಂತಾಗಿದೆ; ಕೆ.ಎಸ್.ಈಶ್ವರಪ್ಪ ವ್ಯಂಗ್ಯ

ರಾಜ್ಯದಲ್ಲಿ ಸಿದ್ದರಾಮಯ್ಯಗೆ ಯಾವ ಕ್ಷೇತ್ರವೇ ಇಲ್ಲದಂತಾಗಿದೆ; ಕೆ.ಎಸ್.ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ: ರಾಜ್ಯದಲ್ಲಿ ಸಿದ್ದರಾಮಯ್ಯಗೆ ಯಾವ ಕ್ಷೇತ್ರವೇ ಇಲ್ಲದಂತಾಗಿದೆ. ಇದರಿಂದ ತಮ್ಮ ಮರ್ಯಾದೆ ಉಳಿಸಿಕೊಳ್ಳೋಕೆ 224 ಕ್ಷೇತ್ರದಲ್ಲಿ, ಯಾವ ಕ್ಷೇತ್ರ ಕೊಟ್ಟರೂ ಓಕೆ ಅಂತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಚುನಾವಣೆ ನಡೆದ್ರೂ ಅದು ಬಿಜೆಪಿ ಗೆಲುವು. ಸಮೀಕ್ಷೆ ವರದಿ ಸಹ ಬಿಜೆಪಿ ಗೆಲುವು ಅಂತಾ ಬರುತ್ತದೆ. ಚುನಾವಣೆ ನಂತರವೂ ಫಲಿತಾಂಶ ಬಿಜೆಪಿ ಗೆಲುವು ಅಂತಲೇ ಬರುತ್ತದೆ ಎಂದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ? ಕರ್ನಾಟಕದಲ್ಲಿ ಹಾಗೋ-ಹೀಗೋ ಅಂತಿತ್ತು. ಆದ್ರೆ ಇಬ್ಬರು ಪೈಲ್ವಾನರಾದ ಡಿಕೆಶಿ , ಸಿದ್ದರಾಮಯ್ಯ ಬಡಿದಾಡುತ್ತಿದ್ದಾರೆ. ಸಿದ್ದರಾಮಯ್ಯ ಮರ್ಯಾದೆ ಉಳಿಸಿಕೊಳ್ಳಲು ಪಾಪ ಯಾವ ಕ್ಷೇತ್ರ ಕೊಟ್ಟರೂ ಓಕೆ ಅಂತಾರೆ ಎಂದು ಕುಟುಕಿದ್ದಾರೆ.