ಶಿಗ್ಗಾಂವ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಆಯೋಜಿಸಿದ ಮಕ್ಕಳ ಆರೋಗ್ಯ ಶಿಬಿರಕ್ಕೆ ಶಿಗ್ಗಾಂವಿ ನಗರದಲ್ಲಿ ಚಾಲನೆ ನೀಡಲಾಯಿತು. ಈ ಶಿಬಿರಗಳಲ್ಲಿ ಮಕ್ಕಳ ತಜ್ಞರಿಂದ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧೋಪಚಾರ ಹಾಗೂ ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ಕಿಟ್ ವಿತರಿಸದರು. ಪೌಷ್ಠಿಕತೆ ಕೊರತೆ ಇರುವ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನಾಲ್ಕು ತಿಂಗಳವರೆಗೆ ನೀಡುವುದರ ಜೊತೆಗೆ ೧೫ ದಿನಕ್ಕೊಮ್ಮೆ ತಪಾಸಣೆ ಮಾಡುವುದಾಗಿ ತಿಳಿಸಿದರು.
ಪೌಷ್ಟಿಕಾಂಶ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಔಷಧಿಗಳನ್ನು ಕೊಟ್ಟು ದುಡಿಯುವ ವರ್ಗದ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ ಹೆಚ್ಚಿರುತ್ತದೆ. ಅಂತಹವರನ್ನು ಗುರುತಿಸಿ ಅವರಿಗೆ ಪೌಷ್ಠಿಕತೆಯನ್ನು ಹೆಚ್ಚಿಸಿ, ಅವರ ಆರೋಗ್ಯವನ್ನು ಉತ್ತಮವಾದ ಸ್ಥಿತಿಗೆ ತರುವುದಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ತಾಲೂಕಾದ್ಯಂತ ೯೮ ಗ್ರಾಮಗಳಲ್ಲಿ ೩೫,೬೦೦ ಮಕ್ಕಳನ್ನು ತಪಾಸಣೆ ಮಾಡುವ ಗುರಿ ಇದೆ. ಜುಲೈ ೩೧ರೊಳಗೆ ಈ ಗುರಿ ಪೂರ್ಣಗೊಳಿಸಲು ಅವಕಾಶ ನೀಡಲಾಗಿದ್ದು ಬಿಸಿಯೂಟದ ಬದಲಾಗಿ ಮಕ್ಕಳಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ. ತಾಲೂಕಿನ ೨೦೪ ಶಾಲೆಗಳ ೨೭,೦೫೪ ಮಕ್ಕಳಿಗೆ ಆಹಾರಧಾನ್ಯ ಕಿಟ್ ಹಾಗೂ ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಮಕ್ಕಳು ಈ ನಾಡಿನ ಹಾಗೂ ದೇಶದ ಭವಿಷ್ಯವಾಗಿದ್ದಾರೆ. ಇದೊಂದು ದೂರು ದೃಷ್ಟಿಯ ಹಾಗೂ ಮಕ್ಕಳ ಸಂರಕ್ಷಣೆ ಕಾರ್ಯಕ್ರಮವಾಗಿದೆ.