ಅತ್ಯಾಚಾರ ಖಂಡಿಸಿ ರಾಜ್ಯಾಧ್ಯತ ಸೈಕಲ್ ಸವಾರಿ

ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಖಂಡಿಸಿ ರಾಜ್ಯಾಧ್ಯತ ಸೈಕಲ್ ಜಾಥಾ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು. ಈಗಾಗಲೇ 14 ಜಿಲ್ಲೆಯಲ್ಲಿ ಪ್ರವಾಸ ಮುಗಿಸಿ 15 ನೇ ಜಿಲ್ಲೆಯಾಗಿ ಧಾರವಾಡಕ್ಕೆ ಯೂವಕನೋರ್ವ ಬಂದಿದ್ದಾನೆ.ವಿಭಿನ್ನ ಪ್ರತಿಭಟನೆ ನಡೆಸಿದ್ದಾನೆ. ಚಾಮರಾಜನಗರದ ಯುವಕ ಕಿರಣ ಎಂಬಾತ ಸೈಕಲ್ ಜಾಥಾ ನಡೆಸುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದು, ಇಂದು ಕಿರಣ ಧಾರವಾಡ ಜಿಲ್ಲೆಗೆ ಆಗಮಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಕಿರಣ ಸೈಕಲ್ ಜಾಥಾಗೆ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬೆಂಬಲ ನೀಡಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಅನಂತರ ಕಿರಣ ಮಾತನಾಡಿ, ಅತ್ಯಾಚಾರ ನಿರ್ಮೂಲನೆಗೆ ಕರ್ನಾಟಕ ಆದ್ಯಂತ ಸೈಕ್ಲಿಂಗ್ ಜಾಥಾ ಆರಂಭಿಸಿದ್ದಾನೆ.ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಅದ್ರಂತೆ ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎನ್ನುವ ಉದ್ದೇಶದಿಂದ ಸೈಕ್ಲಿಂಗ್ ಜಾಥಾ ಆರಂಭಿಸಿದ್ದನೆ ಎಂದರು.