ಗ್ಯಾಸ್ ಸಿಲಿಂಡರ್ ಸ್ಪೋಟ; ಒಂದೇ ಮನೆಯ ನಾಲ್ವರಿಗೆ ಗಾಯ

ಮೈಸೂರು: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸುಮಾರು 10 ಮಂದಿಗೆ ಗಾಯವಾದ ಘಟನೆ ಬನ್ನಿಮಂಟಪದ ಅಗ್ನಿಶಾಮಕ ವಸತಿ ಗೃಹದಲ್ಲಿ ನಡೆದಿದೆ. ವಸತಿಗೃಹದ ಮನೆಯೊಂದರಲ್ಲಿ ಗ್ಯಾಸ್ ಲೀಕೇಜ್ ಆಗಿದ್ದು, ಬೆಳಗ್ಗೆ ಎದ್ದು ಹಾಲು ಕಾಯಿಸಲು ಬೆಂಕಿ ಹಚ್ಚುವ ವೇಳೆ ಸಿಲಿಂಡರ್ ಸ್ಪೋಟಗೊಂಡಿದೆ. ಘಟನೆಯಲ್ಲಿ ಒಂದೇ ಮನೆಯ ನಾಲ್ವರು & ಅಕ್ಕಪಕ್ಕದ 6 ಮಂದಿಗೆ ಗಾಯಗಳಾಗಿವೆ. ಈ ಪೈಕಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ದೇಹದ ಕೆಲ ಭಾಗ ಸುಟ್ಟುಹೋಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.