ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಶಾಕ್ : ಜನವರಿಯಲ್ಲಿ ಉಡುಪು, ಪಾದರಕ್ಷೆ, ಜವಳಿ ಬೆಲೆ ಏರಿಕೆ!

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಶಾಕ್ : ಜನವರಿಯಲ್ಲಿ ಉಡುಪು, ಪಾದರಕ್ಷೆ, ಜವಳಿ ಬೆಲೆ ಏರಿಕೆ!

ನವದೆಹಲಿ : ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಮುಂದಿನ ವರ್ಷದಿಂದ ಜವಳಿ, ಪಾದರಕ್ಷೆಗಳು, ಉಡುಪುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿಯು ಸರಕು ಮತ್ತು ಸೇವಾ ತೆರಿಗೆ ದರವನ್ನು ಶೇ 5ರಿಂದ ಶೇ 12ಕ್ಕೆ ಹೆಚ್ಚಿಸಿದೆ ಹೀಗಾಗಿ 2022 ರ ಜನವರಿ 1 ರಿಂದ ಜವಳಿ, ಪಾದರಕ್ಷೆಗಳು, ಉಡುಪುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಜಿಎಸ್​ಟಿ ಸಮಿತಿಯು ತನ್ನ ಸೆಪ್ಟೆಂಬರ್ ಸಭೆಯಲ್ಲಿ ಜವಳಿ ಮತ್ತು ಪಾದರಕ್ಷೆಗಳಲ್ಲಿನ ಇನ್​ವರ್ಟೆಡ್ ಸುಂಕ ರಚನೆಯನ್ನು ಸರಿಪಡಿಸಲು ತೀರ್ಮಾನ ಮಾಡಿತು. ಇದು ಜನವರಿ 1, 2022ರಂದು ಜಾರಿಗೆ ಬರಲಿದೆ ಎಂದು ಹೇಳಿದೆ.