ದೇಶಾದ್ಯಂತ 864 ಐಪಿಎಸ್‌ ಅಧಿಕಾರಿಗಳ ಹುದ್ದೆಗಳು ಖಾಲಿ

ದೇಶಾದ್ಯಂತ 864 ಐಪಿಎಸ್‌ ಅಧಿಕಾರಿಗಳ ಹುದ್ದೆಗಳು ಖಾಲಿ

ವದೆಹಲಿ,: ಪ್ರಸ್ತುತ ದೇಶಾದ್ಯಂತ ಅಖಿಲ ಭಾರತೀಯ ಪೊಲೀಸ್ ಸೇವೆ ಅಧಿಕಾರಿಗಳ ಒಟ್ಟು 864 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವಾಲಯ (ಎಂಎಚ್‌ಎ) ಮಂಗಳವಾರ ಲೋಕಸಭೆಗೆ ತಿಳಿಸಿದೆ.

ನಿವೃತ್ತಿ, ರಾಜೀನಾಮೆ, ಮರಣ, ಸೇವೆಯಿಂದ ವಜಾಗೊಳಿಸುವಿಕೆಯಂತಹ ಕಾರಣಗಳಿಂದಾಗಿ ಹುದ್ದೆಗಳು ಖಾಲಿಯಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ದ್ರಾವಿಡ ಮುನ್ನೇತ್ರ ಕಳಗಂ ಸಂಸದ ಪೊನ್ ಗೌತಮ್ ಸಿಂಗ್ಮಣಿ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಜನವರಿ 1, 2022ರಂತೆ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್‌) ಅಧಿಕಾರಿಗಳ ಅಧಿಕೃತ ಸಂಖ್ಯೆ 4,984 ಆಗಿದ್ದು, ಪ್ರಸ್ತುತ 4,120 ಐಪಿಎಸ್‌ ಅಧಿಕಾರಿಗಳು ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ರಾಯ್ ಲೋಕಸಭೆಗೆ ತಿಳಿಸಿದರು.

ಈಗಿರುವ ಐಪಿಎಸ್ ಅಧಿಕಾರಿಗಳ ಸಂಖ್ಯೆ ಮತ್ತು ಪ್ರಸ್ತುತ ಸ್ಥಾನದ ಲೆಕ್ಕಾಚಾರವು 864 ಹುದ್ದೆಗಳು ಇನ್ನೂ ಖಾಲಿ ಇವೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) 2020 ರಿಂದ ಐಪಿಎಸ್ (ನೇರ ನೇಮಕಾತಿ) ನೇಮಕಾತಿಯನ್ನು 150 ರಿಂದ 200 ಕ್ಕೆ ಸರ್ಕಾರ ಹೆಚ್ಚಿಸಿದೆ ಎಂದು ಸಚಿವರು ನಂತರ ತಿಳಿಸಿದರು.

ನಿತ್ಯಾನಂದ ರೈ ಅವರು ಇಲ್ಲಿಯವರೆಗೆ ಕೇಂದ್ರೀಯ ಸಂಸ್ಥೆಗಳಲ್ಲಿ ಒಟ್ಟು 226 ಹುದ್ದೆಗಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳು, ಪೊಲೀಸ್ ವರಿಷ್ಠಾಧಿಕಾರಿಯಿಂದ ಪೊಲೀಸ್‌ ಮಹಾನಿರ್ದೇಶಕವರೆಗೆ ಐಪಿಎಸ್‌ ಅಧಿಕಾರಿಗಳು ನಿರ್ವಹಿಸುತ್ತಾರೆ ಎಂದು ತಿಳಿಸಿದರು.

ಐಪಿಎಸ್ ಅಧಿಕಾರಿಗಳು ಕೇಂದ್ರ ನಿಯೋಜನೆಗೆ ಒಲವು ತೋರದಿರುವುದು ನಿಜವೇ ಮತ್ತು ಅಂತಹ ಮೂವರು ಅಧಿಕಾರಿಗಳು ಮಾತ್ರ ಕೇಂದ್ರ ಡೆಪ್ಯುಟೇಶನ್‌ಗೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಇಲ್ಲ ಎಂದು ಹೇಳಿದರು. ಈ ವರ್ಷದಲ್ಲಿ 144 ಐಪಿಎಸ್ ಅಧಿಕಾರಿಗಳು ಕೇಂದ್ರಕ್ಕೆ ನಿಯೋಜನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಷದಲ್ಲಿ ಸಿಎಪಿಎಫ್‌ಗಳು ಮತ್ತು ಸಿಪಿಒಗಳಲ್ಲಿ ಇಲ್ಲಿಯವರೆಗೆ ವಿವಿಧ ಹಂತಗಳಲ್ಲಿ 95 ಐಪಿಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ರೈ ಹೇಳಿದರು.