ಕ್ಯಾನ್ಸರ್ ಪೀಡಿತರಿಗೆ ಗುಡ್ ನ್ಯೂಸ್ ; ಶೀಘ್ರದಲ್ಲೇ 'ಕ್ಯಾನ್ಸರ್ ಲಸಿಕೆ' ಲಭ್ಯ
ನವದೆಹಲಿ : ಒಂದು ಕಾಲದಲ್ಲಿ ಲಕ್ಷಾಂತರ ಜನರಲ್ಲಿ ಕಂಡುಬರುತ್ತಿದ್ದ ಅತ್ಯಂತ ಅಪರೂಪದ ಕಾಯಿಲೆಯಾದ ಕ್ಯಾನ್ಸರ್ ಈಗ ಸಾವಿರಕ್ಕೆ ಒಂದು ಎಂಬಂತಾಗಿದೆ. ಅದ್ರಂತೆ, ಈ ಮಹಾಮಾರಿಗೆ ಅನೇಕ ಜನರು ಸಾವನ್ನಪ್ಪಿದ್ದಾರೆ. ಆದ್ರೆ, ಕೆಲವರು ಈ ಕ್ಯಾನ್ಸರ್ ಮಹಾಮಾರಿಯನ್ನ ಗೆದ್ದಿದ್ದಾರೆ.
ಶೀಘ್ರದಲ್ಲೇ ಬರಲಿರುವ ಕ್ಯಾನ್ಸರ್ ಲಸಿಕೆ ಜ್ವರ ಮತ್ತು ಪೋಲಿಯೊ ಲಸಿಕೆಗಳಂತಹ ರೋಗವನ್ನ ತಡೆಯುವುದಿಲ್ಲ. ಆದ್ರೆ, ಇದು ರೋಗವನ್ನ ಹಿಂತಿರುಗಿಸುವುದನ್ನ ತಡೆಯುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ಗೆಡ್ಡೆಯ ಕೋಶಗಳಲ್ಲಿನ ಪ್ರೋಟೀನ್'ಗಳನ್ನ ಅಪಾಯಕಾರಿ ಎಂದು ಗುರುತಿಸುವಂತೆ ಮಾಡುತ್ತದೆ. ಈಗಾಗಲೇ ಲಭ್ಯವಿರುವ ಇಮ್ಯುನೊಥೆರಪಿ ಪರಿಣಾಮಕಾರಿತ್ವವನ್ನ ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಭಾವಿಸುತ್ತಾರೆ. ಕ್ಯಾನ್ಸರ್ ಲಸಿಕೆಗಳನ್ನ ಅಭಿವೃದ್ಧಿಪಡಿಸುವ ಸಲುವಾಗಿ ವಿಜ್ಞಾನಿಗಳು ಸಾಕಷ್ಟು ಸಂಶೋಧನೆಗಳನ್ನ ಮಾಡಿದ್ದಾರೆ. mRNA ಲಸಿಕೆಯೊಂದಿಗೆ ಇಮ್ಯುನೊಥೆರಪಿಯನ್ನ ನೀಡಿದಾಗ, ಚರ್ಮದ ಕ್ಯಾನ್ಸರ್ ರಿವರ್ಸಲ್ ಅಪಾಯವನ್ನ ತಪ್ಪಿಸಲಾಗುತ್ತದೆ ಎಂದು ತೋರಿಸಲಾಗಿದೆ. ಸಾವಿನ ಸಾಧ್ಯತೆಯು 44 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಕಂಡುಬಂದಿದೆ. ಹಾಗಾಗಿಯೇ ಈ ಸುದ್ದಿ ಎಲ್ಲರಲ್ಲೂ ಭಾರೀ ಕುತೂಹಲ ಮೂಡಿಸಿದೆ.
ಎಂಆರ್‌ಎನ್‌ಎ ಆಧಾರಿತ ಕ್ಯಾನ್ಸರ್ ಲಸಿಕೆಯ ಪರಿಣಾಮಕಾರಿತ್ವವನ್ನ ಸಣ್ಣ ಅಧ್ಯಯನದಲ್ಲಿ ಬಹಿರಂಗಪಡಿಸಿರುವುದು ಇದೇ ಮೊದಲು. ಅದೇ ದೊಡ್ಡ ಸಂಶೋಧನೆಗಳಲ್ಲಿ ಈ ಲಸಿಕೆಯ ವಿಷಯದಲ್ಲಿ ಉತ್ತಮ ಫಲಿತಾಂಶ ಕಂಡುಬಂದರೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದ್ರೆ, ಈ ಲಸಿಕೆಯನ್ನ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಸಾಕಷ್ಟು ಕೆಲಸಗಳನ್ನ ಮಾಡಬೇಕಾಗಿದೆ. ಲಸಿಕೆಯನ್ನ ಕ್ಯಾನ್ಸರ್ ಪೀಡಿತರ ಟ್ಯೂಮರ್ಗಳಲ್ಲಿರುವ ಜೀನ್ಗಳಿಗೆ ಅನುಗುಣವಾಗಿ ಅಳವಡಿಸಬೇಕಾಗುತ್ತದೆ. ಆದರೆ, ಕ್ಯಾನ್ಸರ್ ಲಸಿಕೆ ಕುರಿತಾದ ಈ ಸುದ್ದಿ ಎಲ್ಲರಲ್ಲೂ ಸಂತಸ ಮೂಡಿಸಿದೆ. ಶೀಘ್ರದಲ್ಲೇ ಕ್ಯಾನ್ಸರ್ ಲಸಿಕೆ ಬರಲಿದೆ ಎಂಬ ಸುದ್ದಿಯ ಕುರಿತು ನಿಮ್ಮ ಅಭಿಪ್ರಾಯಗಳನ್ನ ಕಾಮೆಂಟ್ಗಳ ರೂಪದಲ್ಲಿ ಹಂಚಿಕೊಳ್ಳಿ.