KPC,RTPS ನೌಕರರಿಗೆ ಗುಡ್ ನ್ಯೂಸ್ : ಶೇ. 20 ರಷ್ಟು ವೇತನ ಹೆಚ್ಚಳ
ಬೆಂಗಳೂರು : ರಾಜ್ಯ ಸರ್ಕಾರವು ಕೆಪಿಸಿ ಮತ್ತು ಆರ್ ಟಿಪಿಎಸ್ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ನೌಕರರ ಮೂಲ ವೇತನ ಶೇ. 20 ಮತ್ತು ಇತರ ಭತ್ಯೆಗಳನ್ನು ಹೆಚ್ಚಳ ಮಾಡಿದೆ ಎಂದು ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.
ನೌಕರರ ಮೂಲ ವೇತನ ಶೇ. 20 ಮತ್ತು ಇತರ ಭತ್ಯೆಗಳು ಜನವರಿ 1 ರಿಂದಲೇ ಅನ್ವಯವಾಗುವಂತೆ ಹೆಚ್ಚಳವಾಗಿದೆ. ಮೂಲ ವೇತನದಲ್ಲಿ ಹೆಚ್ಚಳದ ಒಪ್ಪಂದವಾದ ಹಿನ್ನೆಲೆಯಲ್ಲಿ ನಿಗಮದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನೌಕರರು ಹಾಗೂ ನಿವೃತ್ತಿ ಪಿಂಚಣಿದಾರರು ಸೇರಿ 11 ಸಾವಿರ ಮಂದಿ ಈ ವೇತನ ಹೆಚ್ಚಳದ ಪರಿಷ್ಕರಣೆಯ ಲಾಭ ಪಡೆಯಲಿದ್ದಾರೆ.