ಮಂಡ್ಯ: ಸುಮಲತಾ ವೇದಿಕೆ ಹತ್ತಿದ್ದಕ್ಕೆ ಆಕ್ರೋಶ; ಕೈ-ಕೈ ಮಿಲಾಯಿಸಿ ಕುರ್ಚಿಯಲ್ಲಿ ಬಡಿದಾಡಿಕೊಂಡ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು!

ಇದರಿಂದ ಸಿಟ್ಟಿಗೆದ್ದ ಜೆಡಿಎಸ್ ಕಾರ್ಯಕರ್ತರು ಕೈಗೆ ಸಿಕ್ಕ ಚೇರ್ಗಳನ್ನು ಎತ್ತಿ ಹಾಕಿದರು. ಸಂಸದೆ ಸುಮಲತಾ ಎದುರು ದೊಡ್ಡ ಹೈಡ್ರಾಮಾವೇ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು, ದೇವಸ್ಥಾನದ ಕಾರ್ಯಕ್ರಮದಲ್ಲಿ ರಾಜಕೀಯಬೇಡ ಸುಮ್ಮನಿರಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಸಮಾಧಾನ ಮಾಡಿದರು.ಇತ್ತ ಜೆಡಿಎಸ್ನವರು ಕಾಂಗ್ರೆಸ್ ನಾಯಕರ ಹಾಗೂ ಸುಮಲತಾರ ಫೋಟೋ ಮಾತ್ರ ಹಾಕಿದ್ದೀರ ಎಂದು ರೊಚ್ಚಿಗೆದ್ದು ಫ್ಲೆಕ್ಸ್ ಅನ್ನು ಹರಿದು ಹಾಕಿ ಗಲಾಟೆ ಮಾಡಿದರು. ಇದರಿಂದ ಬೇಸರಗೊಂಡು ಮಾತನಾಡಿದ ಸುಮಲತಾ, ಬಿ.ಗೌಡಗೆರೆ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ನಾನೂ ಮಾಡಿದ್ದೇನೆ.
ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆಯೇ ಹೊರತು ಯಾರೋ ಮಾಡಿದ ಕೆಲಸಕ್ಕೆ ರಿಬ್ಬನ್ ಕಟ್ ಮಾಡೋದಕ್ಕೆ ನಾನಿಲ್ಲಿಗೆ ಬಂದಿಲ್ಲ. ಅಂತಹ ಚೀಪ್ ಪಬ್ಲಿಸಿಟಿ ನನಗೆ ಬೇಕಾಗಿಯೂ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಗರಂ ಆಗಿಯೇ ನುಡಿದರು. ನಾನು ಬಂದರೆ ನನ್ನನ್ನು ನೋಡುವ ಆಸೆಯಿಂದ ಜನರು ಸೇರುತ್ತಾರೆ. ಕೆಲವರು ಪ್ರಚಾರ ತೆಗೆದುಕೊಳ್ಳುವ ದುರಾಸೆಯಿಂದ ಈ ರೀತಿ ಮಾಡುತ್ತಾರೆ.
ಇದರಿಂದ ಯಾರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಪಕ್ಷೇತರ ಸಂಸದೆಗೆ ಒಂದೊಂದು ಕೆಲಸ ಮಾಡಿಸೋದು ಎಷ್ಟುಸವಾಲಾಗಿದೆ. ಆ ಬಗ್ಗೆ ನಿಮ್ಮ ಬಳಿ ಹೇಳಿಕೊಂಡಿದ್ದೇನಾ. ಸರ್ಕಾರ, ಮಂತ್ರಿಗಳು ಅಥವಾ ಅಧಿಕಾರಿಗಳಿರಬಹುದು ಅವರಿಂದ ನನಗೆ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ.