Kanva Dam: 18 ವರ್ಷಗಳ ಬಳಿಕ ಕಣ್ವ ಡ್ಯಾಂ ಭರ್ತಿಗೆ ಕ್ಷಣಗಣನೆ

Kanva Dam: 18 ವರ್ಷಗಳ ಬಳಿಕ ಕಣ್ವ ಡ್ಯಾಂ ಭರ್ತಿಗೆ ಕ್ಷಣಗಣನೆ
ರಾಮನಗರ(ಚನ್ನಪಟ್ಟಣ): ನಿರಂತರ ಮಳೆಯಿಂದಾಗಿ ಬರಿದಾಗಿದ್ದ ರೇಷ್ಮೆನಾಡಿನ ಕೆರೆ, ಕುಂಟೆಗಳು ಜೀವಕಳೆ ಪಡೆದುಕೊಂಡಿವೆ. ಜಲಾಶಯಗಳಲ್ಲಿ (Dam Levels) ನೀರಿನ ಪ್ರಮಾಣ ಏರಿಕೆಯಾಗಿದ್ದು, ಕೆಲವೇ ದಿನಗಳಲ್ಲಿ ಜಲಾಶಯಗಳು ಭರ್ತಿಯಾಗುವ ಭರವಸೆ ಮೂಡಿಸಿದೆ. ಇನ್ನು ನೀರಿಲ್ಲದೆ ಕಳೆದ 18 - 20 ವರ್ಷಗಳಿಂದ ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದ ಕಣ್ವ ಜಲಾಶಯ (Kanva Dam) ಇದೀಗ ಕಳೆಕಟ್ಟುತ್ತಿದೆ.
ರಾಮನಗರ (Ramanagara) ಜಿಲ್ಲೆಯ ಬೊಂಬೆನಗರಿ ಚನ್ನಪಟ್ಟಣ (Channapattana) ತಾಲೂಕಿನ ಜೀವನಾಡಿ ಎನ್ನಿಸಿಕೊಂಡಿದ್ದ ಕಣ್ವ ಜಲಾಶಯ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ (Rainfall) ಭರ್ತಿಗೊಳ್ಳುವತ್ತ ಸಾಗಿದೆ.
ಇನ್ನು ಕಣ್ವ ಮಹರ್ಷಿ ತಪಸ್ಸು ಮಾಡಿದ್ದರು ಎಂದೇ ಐತಿಹ್ಯ ಹೊಂದಿರುವ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಜಲಾಶಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಆದರೆ ಕಳೆದ 20 ವರ್ಷಗಳಿಂದ ನೀರಿಲ್ಲದೇ ಜಲಾಶಯ ಒಣಗುವ ಸ್ಥಿತಿಗೆ ತಲುಪಿತ್ತು. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ನೀರು ಸಿಗದೆ ಈ ಭಾಗದ ರೈತರು ಹತಾಶಗೊಂಡಿದ್ದರೆ, ಪ್ರವಾಸಿಗರು ಬರಡು ಜಲಾಶಯ ಕಂಡು ಬೇಸರಗೊಂಡಿದ್ದರು.
32.7 ಅಡಿ ಸಾಮರ್ಥ್ಯ ಹೊಂದಿರುವ ಈ ಜಲಾಶಯ
ಕಳೆದ ಹಲವು ದಿನಗಳಿಂದ ರೇಷ್ಮೆನಾಡಿನಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಕಣ್ವ ಜಲಾಶಯ ಭರ್ತಿಗೊಳ್ಳುತ್ತಿದ್ದು ಸದ್ಯ‌ 30.7 ಅಡಿಗಳಷ್ಟು ತುಂಬಿದೆ. ಒಟ್ಟು 32.7 ಅಡಿ ಸಾಮರ್ಥ್ಯ ಹೊಂದಿರುವ ಈ ಜಲಾಶಯ ಇನ್ನು ಎರಡು ಅಡಿ ತುಂಬಿದಲ್ಲಿ ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನ ಹೊರಬಿಡಲಾಗುವುದು ಎಂದು ಕಣ್ವ ಜಲಾಶಯದ ಸಿಬ್ಬಂದಿ ತಿಳಿಸಿದ್ದಾರೆ.
ಹೆಚ್ಚುವರಿಯಾಗಿ ಹೊರಹೋಗುವ ನೀರು ಮದ್ದೂರಿನ ಕಾವೇರಿ ಹೊಳೆಯ ಮೂಲಕ ಸಂಗಮ ಸೇರಿ ನಂತರ ಮೇಕೆದಾಟಿನ ಮೂಲಕ ತಮಿಳುನಾಡು ಸೇರಲಿದೆ.

ಡ್ಯಾಂ ವೀಕ್ಷಣೆಗೆ ಪ್ರವಾಸಿಗರ ದಂಡು, ಕಣ್ವ ಕಂಡು ಸಂತಸ :
ಕಳೆದ 15 ದಿನಗಳಿಂದ ರಾಮನಗರ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದೆ.‌ ಈ ಹಿನ್ನೆಲೆ ಚನ್ನಪಟ್ಟಣದ ಕಣ್ವ ಜಲಾಶಯ ಕಳೆಕಟ್ಟಿದೆ. 32.7 ಅಡಿ ಸಾಮರ್ಥ್ಯ ಹೊಂದಿರುವ ಡ್ಯಾಂ, ಸದ್ಯ 30.7 ಅಡಿಯಷ್ಟು ತುಂಬಿದೆ. ಇನ್ನು 2 ಅಡಿಯಷ್ಟು ನೀರು ತುಂಬಿದರೆ ಡ್ಯಾಂ ಭರ್ತಿ‌ಯಾಗಲಿದೆ.

ನಂತರ ಹೆಚ್ಚುವರಿ ನೀರನ್ನ ಹೊರಬಿಡುವ ಸಾಧ್ಯತೆ ಇದೇ ಎನ್ನಲಾಗ್ತಿದೆ. ಸದ್ಯ 4 ಕ್ರಸ್ಟ್ ಗೇಟ್ ಒಳಗೊಂಡಿರುವ ಕಣ್ವ ಡ್ಯಾಂ ‌18 ವರ್ಷದ ಬಳಿಕ ಹೆಚ್ಚು ನೀರು ಡ್ಯಾಂ ನಲ್ಲಿ ಸಂಗ್ರಹವಾಗಿದೆ.

ಈ ನೀರನ್ನ ಮತ್ತು ಡ್ಯಾಂ ವೀಕ್ಷಣೆ ಮಾಡಲು ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರು ಭಾಗದಿಂದಲೂ ಸಹ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದಾರೆ.

ಕಣ್ವ ಡ್ಯಾಂ ವೀಕ್ಷಣೆಗಾಗಿ ಬರುತ್ತಿರುವ ಜನರು ಡ್ಯಾಂ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಕಣ್ವ ಸುತ್ತಮುತ್ತಲಿನ‌ ಪ್ರದೇಶದಲ್ಲಿ ಅಂತರ್ಜಲವೂ ಸಹ ಹೆಚ್ಚಳವಾಗಿದ್ದು ಈ ಭಾಗದ ರೈತರು ಸಂತಸಗೊಂಡಿದ್ದಾರೆ. ಜೊತೆಗೆ ಕ್ರಸ್ಟ್ ಗೇಟ್ ತೆರೆದರೆ ಈ ಭಾಗದ ರೈತರ ಜಮೀನಿಗೆ ಕೊಂಚ ಕಷ್ಟವಾಗಲಿದೆ ಎಂಬ ಮಾತುಗಳಿವೆ.

ಕಳೆದೊಂದು ವಾರದಿಂದ ರಾಜ್ಯದಲ್ಲಿ (Karnataka Rains) ಸುರಿಯುತ್ತಿರುವ ಅಬ್ಬರದ ಮಳೆ ಮುಂದಿನ ಎರಡು ದಿನ ತಗ್ಗಲಿದೆ. ಆದ್ರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಲಿದ್ದು, ಒಂದೆರಡು ಬಾರಿ ಜೋರು ಮಳೆ (Rainfall)ಯಾಗಲಿದೆ.

ಭಾನವಾರ ಹಗಲು ಬ್ರೇಕ್ ನೀಡಿದ್ದ ಮಳೆ, ಸಂಜೆ ವೇಳೆಗೆ ಅಬ್ಬರಿಸಿದೆ. ಇಂದು ಬೆಂಗಳೂರಿನಲ್ಲಿ (Bengaluru Rain) ಕನಿಷ್ಠ 19, ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮೇಲ್ಮೈ ಸುಳಿಗಾಳಿ ದುರ್ಬಲಗೊಳ್ಳುತ್ತಿರುವ ಹಿನ್ನೆಲೆ ಬುಧವಾರದಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಲಿದೆ. ದಕ್ಷಿಣ ಒಳನಾಡು ಮತ್ತು ಕರವಾಳಿ ಭಾಗದಲ್ಲಿಯೂ ಮಳಯ ಅಬ್ಬರ ಕಡಿಮೆಯಾಗಲಿದೆ .