ಯು.ಕೆ ದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯರಿಗೆ ವಂಚನೆ : ಬೆಂಗಳೂರಲ್ಲಿ ನೈಜೀರಿಯಾ ಪ್ರಜೆ ಅರೆಸ್ಟ್
ಯು.ಕೆ ದೇಶದಲ್ಲಿ ಕಾಸ್ಮೀರ್ ಶೆಲ್ ಆಯಿಲ್ ಕಂಪನಿಗಳಲ್ಲಿ ಮ್ಯಾನೆಜ್ಮೆಂಟ್ ಹುದ್ದೆ, ಸ್ಟಾಫ್ ನರ್ಸ್, ಮುಂತಾದ ಹುದ್ದೆಗಳಲಿ ಕೆಲಸ ಗಿಟ್ಟಿಸಿ ಕೊಡಿಸೋದಾಗಿ ಗುಬ್ಬಿ ಮೂಲದ ಮಹಿಳೆಯರಿಗೆ ಸದ್ದಿಲ್ಲದೆ ಇ-ಮೇಲ್ ಕಳಿಸಿದ್ದಾನೆ.ಇದಕ್ಕೆ ಆಸೆ ಪಟ್ಟು ವಿವಿಧ ಶುಲ್ಕ ಹಾಗೂ ಕ್ಲಿಯರೆನ್ಸ್ ಶುಲ್ಕ ಅಂತಾ 35 ಲಕ್ಷ ಹಣವನ್ನ ಪಡೆದುಕೊಂಡಿದ್ದು, ಹಣ ಅಕೌಂಟ್ ಬಂದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.
ಈ ಘಟನೆ ಸಂಬಂಧ ಈಶ್ಯಾನ ವಿಭಾಗದ ಸೈಬರ್ ಕ್ರೈಂ ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ. ಹೈದರಾಬಾದ್ ಮತ್ತು ತಮಿಳುನಾಡಿನ ಕರೂರಿನಲ್ಲೂಇದೇ ರೀತಿ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬಳಿಕ ವಂಚನೆ ಮಾಡುತ್ತಿದ್ದ ವ್ಯಕ್ತಿ ನೈಜೀರಿಯಾ ಪ್ರಜೆ ಎಂದು ಗುರುತಿಸಲಾಗಿದೆ. ನೋಕೋಚಾ ಕಾಸ್ಮೀರ್ ಎಂಬಾತನ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ.