ಸರ್ವಪಕ್ಷ ಸಭೆ ಕರೆಯುವ ಸಂದರ್ಭ ಬಂದಿಲ್ಲ ಎಂದ ಕಾರಜೋಳ

ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದಕ್ಕೆ ಸಂಬಂಧಿಸಿ ಈ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆಗೆ ಆಗ್ರಹಿಸಿದ್ದರು. ಈ ಸಂಬಂಧ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ. ಸರ್ವಪಕ್ಷ ಸಭೆ ಕರೆಯುವ ಸಂದರ್ಭ ಬಂದಿಲ್ಲ. ಸಿದ್ದರಾಮಯ್ಯ ಬಯಸಿದಂತೆ ರಾಜಕಾರಣ ಮಾಡಲು ಸಾಧ್ಯವಿಲ್ಲ. ಗಡಿ ವಿವಾದ ಬಗ್ಗೆ ಯಾವಾಗ ಸಭೆ ಕರೆಯಬೇಕೆಂದು ನಮಗೆ ಗೊತ್ತು. ಯಾವಾಗ ಸರ್ವಪಕ್ಷ ಕರೆಯಬೇಕು ಅನ್ನೋದು ಆಡಳಿತ ಪಕ್ಷಕ್ಕೆ ಗೊತ್ತು ಎಂದರು.