ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ಗೆ ಬೈಕ್‌ ಅಪಘಾತದಲ್ಲಿ ಗಾಯ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ಗೆ ಬೈಕ್‌ ಅಪಘಾತದಲ್ಲಿ ಗಾಯ

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ ಅವರು ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಮಗ ಜಾಕ್ಸನ್ ಅವರೊಂದಿಗೆ ಹೋಗುವಾಗ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಅವರಿಗೆ ಮೂಗು, ಕಾಲು, ಬಲ ಪಾದದಲ್ಲಿ ಗಾಯಗಳಾಗಿವೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಅಪಘಾತದ ಬಳಿಕ ಶೇನ್‌ ವಾರ್ನ್‌ ಅವರು ಮನೆಗೆ ತೆರಳಿದ್ದರು. ಮರು ದಿನ ಬೆಳಗ್ಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ತೆರಳಿದ್ದೆ ಎಂದು ಹೇಳಿದ್ದಾರೆ.

52 ವರ್ಷದ ಶೇನ್‌ ವಾರ್ನ್‌ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿಲ್ಲ, ಅವರು ಎರಡು-ಮೂರು ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶೇನ್‌ ವಾರ್ನ್‌ ಅವರ ಅಪಘಾತದ ಸುದ್ದಿಯನ್ನು ಆಸ್ಟ್ರೇಲಿಯಾದ ಸಿಡ್ನಿ ಹೆರಾಲ್ಡ್‌ ಪತ್ರಿಕೆ ವರದಿ ಮಾಡಿದೆ.

ಮುಂಬುರುವ ಆಯಶಷ್‌ ಟೆಸ್ಟ್‌ ಸರಣಿಯಲ್ಲಿ ಶೇನ್‌ ವಾರ್ನ್‌ ತೊಡಗಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ. ಗಾಬಾದಲ್ಲಿ ಡಿಸೆಂಬರ್‌ 8ರಿಂದ ಟೆಸ್ಟ್‌ ಸರಣಿ ಆರಂಭವಾಗಲಿದೆ.