ಮೈಸೂರಿನ ಒಬ್ಬರಿಗೆ ಪದ್ಮಭೂಷಣ, ಇಬ್ಬರಿಗೆ ಪದ್ಮಶ್ರೀ ಪ್ರಶಸ್ತಿ, ಇಲ್ಲಿದೆ ನೋಡಿ ವಿವರ

ಮೈಸೂರಿನ ಒಬ್ಬರಿಗೆ ಪದ್ಮಭೂಷಣ, ಇಬ್ಬರಿಗೆ ಪದ್ಮಶ್ರೀ ಪ್ರಶಸ್ತಿ, ಇಲ್ಲಿದೆ ನೋಡಿ ವಿವರ

ಮೈಸೂರು, ಜನವರಿ, 26: ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತರೆ, ಸಿರಿಧಾನ್ಯ ಆಹಾರ ತಜ್ಞ ಡಾ.ಖಾದರ್ ವಲಿ ಹಾಗೂ ತಾಳೆಗರಿ ಸಂರಕ್ಷಕ ಎಸ್.ಸುಬ್ಬರಾಮನ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಲಭಿಸಿದೆ.

ವಿಶೇಷವೆಂದರೆ ಈ ಮೂವರು ಸಾಧಕರು ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ ಸಾಂಸ್ಕೃತಿಕ ನಗರಿಗೆ ಇದು ಮತ್ತೊಂದು ಗರಿ ಎಂದೇ ಹೇಳಬಹುದು.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಲಿಂಗಣ್ಣಯ್ಯ-ಗೌರಮ್ಮ ದಂಪತಿಗಳ ಪುತ್ರರಾದ ಎಸ್.ಎಲ್.ಭೈರಪ್ಪ ಮೈಸೂರಿನ ಕುವೆಂಪು ನಗರದಲ್ಲಿ ವಾಸವಿದ್ದಾರೆ. ಮೈಸೂರಿನ ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮುಗಿಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು.

ಪ್ರಶಸ್ತಿ ಪಡೆದುಕೊಂಡವರ ವಿವರ

ಪ್ರಶಸ್ತಿ ಲಭಿಸುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ ಇದೀಗ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ತಂದಿದೆ ಎಂದು ಸಾಹಿತಿ ಎಸ್.ಭೈರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಇವರು 2016ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು. ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಕನ್ನಡದಲ್ಲಿ ಪಡೆದವರಲ್ಲಿ ಇವರೇ ಮೊದಲಿಗರಾಗಿದ್ದಾರೆ. ಹತ್ತಾರು ಕೃತಿಗಳನ್ನು ಬರೆದಿದ್ದಾರೆ. ಇವರ ಕೃತಿಗಳು ಮರಾಠಿ, ಇಂಗ್ಲಿಷ್, ಹಿಂದಿ ಭಾಷೆಗೆ ಅನುವಾದಗೊಂಡಿವೆ. ಅಲ್ಲದೆ, ಇವರ ಪರ್ವ ನಾಟಕವನ್ನು ಮೈಸೂರು ರಂಗಾಯಣ ರಂಗರೂಪಕ್ಕೂ ತಂದಿದೆ.

ಡಾ.ಖಾದರ್ ಅವರು ನಡೆದುಬಂದ ಹಾದಿ

ಇನ್ನು ಡಾ.ಖಾದರ್ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಜನಿಸಿದವರಾಗಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರು. ಆದರೆ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿಯನ್ನು ಕರ್ನಾಟಕ ರಾಜ್ಯದಲ್ಲಿ ಮುಗಿಸಿದರು. ಕಾಡು ಕೃಷಿ ವಿಧಾನದ ಮೂಲಕ ಅಧ್ಯಯನ ನಡೆಸಿದರು. ಈ ಮೂಕಲ ಸಾವಿರಾರು ರೈತರಿಗೆ ಮಾರ್ಗದರ್ಶನ ಮಾಡಿದರು. ಸಿರಿಧಾನ್ಯದಲ್ಲಿ ಕ್ಯಾನ್ಸರ್‌ಗೆ ಮದ್ದಿಗೆ ಎಂದು ಪ್ರತಿಪಾದಿಸಿದ್ದಾರೆ. ಹೀಗೆ ಕಡಿಮೆ ವೆಚ್ಚದಲ್ಲಿ ಬಹುತೇಕ ಕಾಯಿಲೆಗಳನ್ನು ಗುಣಪಡಿಸುವ ವೈದ್ಯರಾಗಿಯೂ ಜನಪ್ರಿಯರಾಗಿದ್ದಾರೆ.

ಅಮೆರಿಕಾರದಲ್ಲಿ ದೊಡ್ಡ ಹುದ್ದೆ, ಕೈತುಂಬಾ ಸಂಬಳ ಇದ್ದರೂ ಡಾ. ಖಾದರ್ ವಲಿ ಮನಸ್ಸು ಚಡಪಡಿಸಿದ್ದು ಮಾತ್ರ ಜನರ ಸಾಮಾನ್ಯರ ಸೇವೆಗೆ. ಹಾಗಾಗಿ ತಮ್ಮ ಸಿರಿವಂತಿಕೆ ಜೀವನಕ್ಕೆ ತಿಲಾಂಜಲಿ ಹಾಡಿ ಮೈಸೂರಿನ ತೊಣಚಿಕೊಪ್ಪಲಿನಲ್ಲಿ ಬಂದು ನೆಲೆಸಿದರು. ಇನ್ನು ಸುಬ್ಬರಾವ್ ಅವರ ಮಾರ್ಗದರ್ಶನದಲ್ಲಿ ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ 15 ಲಕ್ಷಕ್ಕೂ ಹೆಚ್ಚು ತಾಳೆಗರಿಯನ್ನು ಎಸ್. ಸುಬ್ಬರಾಮನ್ ಸಂರಕ್ಷಿಸಿದ್ದಾರೆ.

ತಾಳೆಗರಿ ಸಂರಕ್ಷಣಾ ಕಾರ್ಯದಲ್ಲಿ ನಿರತ

ಎಸ್. ಸುಬ್ಬರಾಮನ್ ಮದ್ರಾಸ್‌ನಲ್ಲಿ ಆಹಾರ ಮತ್ತು ಔಷಧ ವಿಶ್ಲೇಷಕರಾಗಿದ್ದರು. 94ನೇ ವರ್ಷದ ಇಳಿವಯಸ್ಸಿನಲ್ಲೂ ತಾಳೆಗರಿ ಸಂರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಜಂತಾ, ಹಳೇಬೀಡು ಮುಂತಾದ ಪಾರಂಪರಿಕ ತಾಣಗಳ ಮತ್ತು ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕೆಲಸದಲ್ಲಿ ತೊಡಗಿಸಿಕೊಂಡ, ದೇಶ ಕಂಡ ಅಪರೂಪದ ಪುರಾತತ್ವ ಶಾಸ್ತ್ರಜ್ಞ ಇವರಾಗಿದ್ದಾರೆ.

By ಮೈಸೂರು ಪ್ರತಿನಿಧಿ Oneindia