ಆಕ್ಲಂಡ್ ನಗರ ಸ್ಥಳೀಯ ಸಂಸ್ಥೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಜನನಿ

ಹ್ಯೂಸ್ಟನ್: ಅಮೆರಿಕದ ಹ್ಯೂಸ್ಟನ್ನಲ್ಲಿರುವ ಆಕ್ಲಂಡ್ ನಗರ ಸ್ಥಳೀಯ ಸಂಸ್ಥೆಯ ಸದಸ್ಯರಾಗಿ ಭಾರತೀಯ ಮೂಲದ, ಎಲ್ಜಿಬಿಟಿ ಸಮುದಾಯದ ಜನನಿ ರಾಮಚಂದ್ರನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜ.10ರಂದು ಈ ಕಾರ್ಯಕ್ರಮ ನಡೆದಿತ್ತು.
ಕ್ಯಾಲಿಫೋರ್ನಿಯಾ ಪ್ರಾಂತ್ಯದ ಆಕ್ಲಂಡ್ ನಗರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅತ್ಯಂತ ಕಿರಿಯವಳಾಗಿ ನಗರ ಸ್ಥಳೀಯ ಸಂಸ್ಥೆಯ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದು ಜನನಿ ರಾಮಚಂದ್ರನ್ ಟ್ವೀಟ್ ಮಾಡಿದ್ದಾರೆ.
ಸ್ಟಾನ್ಫೋರ್ಡ್ ವಿವಿ ಮತ್ತು ಕ್ಯಾಲಿಫೋರ್ನಿಯಾ ವಿವಿಯ ಪದವೀಧರೆಯಾಗಿರುವ ಅವರು, ಸದ್ಯ ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳ ಅಮೆರಿಕನ್ ವ್ಯವಹಾರಗಳ ಕ್ಯಾಲಿಪೋರ್ನಿಯಾ ಆಯೋಗದಲ್ಲಿ ಇದ್ದಾರೆ.