ಕಣ್ಣಂಚನ್ನು ತೇವಗೊಳಿಸುತ್ತೆ 100 ವರ್ಷದ ತಂದೆ ಮತ್ತು 75 ವರ್ಷದ ಮಗನ ನಡುವಿನ ಭಾವುಕ ಕ್ಷಣಗಳ ವಿಡಿಯೋ

ಕಣ್ಣಂಚನ್ನು ತೇವಗೊಳಿಸುತ್ತೆ 100 ವರ್ಷದ ತಂದೆ ಮತ್ತು 75 ವರ್ಷದ ಮಗನ ನಡುವಿನ ಭಾವುಕ ಕ್ಷಣಗಳ ವಿಡಿಯೋ

ತ್ತೀಚಿಗೆ ಕುಟುಂಬದವರ ಮಧ್ಯೆ ಬಾಂಧವ್ಯ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಸಮಯದ ಅಭಾವ. ಆದರೆ ನಮ್ಮ ಹೆತ್ತವರೊಂದಿಗೆ ನಾವು ಹಂಚಿಕೊಳ್ಳುವ ಬಾಂಧವ್ಯವು ವಿಶೇಷ ಮತ್ತು ಅಮೂಲ್ಯವಾದುದು.

ನಮ್ಮ ಹಿರಿಯರನ್ನು ಸಂತೋಷದಿಂದ ನೋಡಿಕೊಳ್ಳಲು ನಾವು ತೆಗೆದುಕೊಳ್ಳುವ ಕಾಳಜಿಯು ತುಂಬಾ ಪರಿಣಾಮಕಾರಿಯಾದದ್ದು.

ಅಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ 70 ವರ್ಷದ ಮಗ, ಅನಾರೋಗ್ಯದ ಸ್ಥಿತಿಯಲ್ಲಿರುವ ತಮ್ಮ ತಂದೆಯನ್ನ ಹೇಗೆ ನೋಡಿಕೊಳ್ಳುತ್ತಾರೆ ಮತ್ತು ಅವರ ನಡುವಿನ ಬಾಂಧವ್ಯ ಎಷ್ಟು ಮಧುರವಾದದ್ದು ಎಂಬುದನ್ನ ತೋರಿಸುತ್ತೆ.

ವಿಡಿಯೋದಲ್ಲಿ, ವಯಸ್ಸಾದ ಮಗ ತನ್ನ ತಂದೆಯನ್ನು ಜನಪ್ರಿಯ ತಮಿಳು ಹಾಡನ್ನು ಕಂಡುಹಿಡಿಯುವಂತೆ ವಿಷಲ್ ಹಾಕುತ್ತಾರೆ.

ಜೆಮಿನಿ ಗಣೇಶನ್ ಮತ್ತು ವೈಜಯಂತಿಮಾಲರ ರೆಟ್ರೋ ಬೀಟ್ 'ಪಾಟ್ಟು ಪಾದವ'ದ ಸಾಹಿತ್ಯವನ್ನು ಅವರು ಶಿಳ್ಳೆ ಹೊಡೆಯುತ್ತಾರೆ.

ಹಾಡು ಕೇಳುತ್ತಾ ತಂದೆ ಸೂಕ್ಷ್ಮವಾಗಿ ಮುಗುಳ್ನಕ್ಕು ತಮ್ಮ ಧ್ವನಿಯಲ್ಲಿ ಸರಿಯಾದ ಊಹೆ ಮಾಡುತ್ತಾರೆ. ಈ ವಿಡಿಯೋ ವೈರಲ್ ಆಗಿದ್ದು ವಯಸ್ಸಾಗಿರುವ ತಂದೆ ಮತ್ತು ಮಗ ಜೀವನದ ಕ್ಷಣಗಳನ್ನು ಆನಂದಿಸುತ್ತಿರುವುದು ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

ವಿಡಿಯೋದಲ್ಲಿರುವ 75 ವರ್ಷದ ಮಗ ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಜನರಲ್ ಮ್ಯಾನೇಜರ್ ಆಗಿದ್ದು ಅವರ ತಂದೆಗೆ 100 ವರ್ಷ ವಯಸ್ಸಾಗಿದೆ ಎಂದು ಹೇಳಲಾಗಿದೆ.