ಮದ್ಯದಂಗಡಿಗಳನ್ನು ಗೋ ಶಾಲೆಗಳಾಗಿ ಮಾರ್ಪಾಡು ಮಾಡಿ : ಬಿಜೆಪಿ ಹಿರಿಯಾ ನಾಯಕಿ ಉಮಾಪತಿ

ಮದ್ಯದಂಗಡಿಗಳನ್ನು ಗೋ ಶಾಲೆಗಳಾಗಿ ಮಾರ್ಪಾಡು ಮಾಡಿ : ಬಿಜೆಪಿ ಹಿರಿಯಾ ನಾಯಕಿ ಉಮಾಪತಿ

ಭೋಪಾಲ್‌ : ದಿನದಿಂದ ದಿನಕ್ಕೆ ಮಹಿಳೆಯರ ವಿರುದ್ಧ ಅಪರಾಧಗಳ ಹೆಚ್ಚಳಕ್ಕೆ ಮಧ್ಯ ಸೇವನೆಯೇ ಪ್ರಮುಖ ಕಾರಣವಾಗಿದೆ. ಹಾಗಾಗಿ ಮದ್ಯದಂಗಡಿಗಳನ್ನು ಗೋ ಶಾಲೆಗಳಾಗಿ ಮಾರ್ಪಾಡು ಮಾಡಿ ಎಂದು ಬಿಜೆಪಿ ಹಿರಿಯಾ ನಾಯಕಿ ಉಮಾಪತಿ (Senior BJP leader Umapati) ಒತ್ತಾಯಿಸಿದ್ದಾರೆ.

ಬಿಜೆಪಿ ಹಿರಿಯಾ ನಾಯಕಿ ಉಮಾಪತಿ ಅವರು ನಾಲ್ಕು ದಿನಗಳ ಕಾಲ ಭೋಪಾಲ್‌ ನ ದೇವಸ್ಥಾನವೊಂದರಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ನಿಯಂತ್ರಿತ ಮದ್ಯ ನೀತಿಯ ಬೇಡಿಕೆ ಬೆಂಬಲಿಸುವ ಸಲುವಾಗಿ 'ಮಧುಶಾಲಾ ಮೇ ಗೌಶಾಲಾ' (ಮದ್ಯ ಮಾರಾಟ ಕೇಂದ್ರ ಸ್ಥಳದಲ್ಲಿ ಗೋಶಾಲೆಗಳು) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.

ಮದ್ಯದ ನೀತಿಗೆ ಕಾಯದೆ, ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಮದ್ಯದಂಗಡಿಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸಲು ಮುಂದಾಗುತ್ತೇನೆ ಎಂದರು` ನನ್ನನ್ನು ಯಾರು ತಡೆಯುತ್ತಾರೆ ಅನ್ನೋದನ್ನು ನೋಡುವೆ ಬಹಿರಂಗವಾಗಿ ಮದ್ಯದಂಗಡಿಗಳನ್ನು ಗೋ ಶಾಲೆಗಳಾಗಿ ಮಾರ್ಪಾಡು ಮಾಡಿ ಆಗ್ರಹಿಸಿದ್ದಾರೆ. ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಸಲು ಹೊಸ ಚಿಂತನೆ ಮುಂದಾಗಿದ್ದಂತೂ ನಿಜ.