ವಿಡಿಯೊ ನೋಡಿ: ಮಹಡಿಯಿಂದ ನೆಲಕ್ಕೆ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ಯುವಕ

ಬೆಂಗಳೂರು: ಕೆಲವೊಮ್ಮೆ ಅಚ್ಚರಿಗಳು ತನ್ನಿಂದ ತಾನೇ ನಡೆಯುತ್ತವೆ. ಇಂತಹ ಘಟನೆಗಳನ್ನು ನಾವು ಈಗಿಗ ಸಿಸಿಟಿವಿ ಅನುಕೂಲತೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುತ್ತೇವೆ.
ಇದೀಗ ಇಂತಹದೇ ಅಚ್ಚರಿ ಎನಿಸುವ ಘಟನೆಯೊಂದು ದಕ್ಷಿಣ ಚೀನಾದಲ್ಲಿ ನಡೆದಿರುವುದು ವರದಿಯಾಗಿದೆ.
ರಸ್ತೆಯಲ್ಲಿ ಕಾರನ್ನು ಹತ್ತಲು ವ್ಯಕ್ತಿಯೊಬ್ಬ ತೆರಳುತ್ತಿದ್ದ. ಈ ವೇಳೆ ರಸ್ತೆ ಬದಿಯ ಬೃಹತ್ ಕಟ್ಟಡದ ಎರಡನೇ ಮಹಡಿಯಿಂದ ಮಗು ಆಕಷ್ಮಿಕವಾಗಿ ಬೀಳುತ್ತಿರುವುದು ಕಂಡು ಬಂತು.
ತಕ್ಷಣವೇ ಕಾರು ಹತ್ತುತ್ತಿದ್ದ ವ್ಯಕ್ತಿ ಓಡಿ ಹೋಗಿ ಮಗು ಬೀಳುವ ಸ್ಥಳದ ಬಳಿ ನಿಂತು ಮಗು ಇನ್ನೇನು ನೆಲಕ್ಕೆ ಬಿದ್ದು ಸಾಯುತ್ತದೆ ಎನ್ನುವಾಗಲೇ ಆ ವ್ಯಕ್ತಿ 6 ವರ್ಷದ ಮಗುವನ್ನು ಕೈಯಿಂದ ಹಿಡಿದು ಬದುಕಿಸಿದ್ದಾನೆ.
ಈ ಸುದ್ದಿ ಹಾಗೂ ವಿಡಿಯೊವನ್ನು ಟ್ವಿಟರ್‌ನಲ್ಲಿ ಚೀನಾದ ಸೌತರ್ನ್ ಚೀನಾ ಮಾರ್ನಿಂಗ್ ಪೋಸ್ಟ್ ಎಂಬ ಸುದ್ದಿತಾಣ ಪೋಸ್ಟ್ ಮಾಡಿದೆ. ಆ ಕ್ಷಣದಲ್ಲಿ ಮಗುವನ್ನು ರಕ್ಷಿಸಬೇಕು ಎಂದು ನನ್ನನ್ನೇ ನಾನು ಮರೆತು ಮಗುವನ್ನು ಬದುಕಿಸಿದೆ ಎಂದು ವ್ಯಕ್ತಿ ಹೇಳಿದ್ದಾರೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಸಣ್ಣ ಗಾಯಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.