ಅರ್ಕಾವತಿ ಬಡಾವಣೆ ಡೀನೋಟಿಫಿಕೇಷನ್ ಪ್ರಕರಣ: ನಾನು ಮಾಡಿದ್ದಲ್ಲ, ಬಿಜೆಪಿಯವರೇ ಮಾಡಿದ್ದು - ಸಿದ್ಧರಾಮಯ್ಯ ಸ್ಪಷ್ಟನೆ

ಅರ್ಕಾವತಿ ಬಡಾವಣೆ ಡೀನೋಟಿಫಿಕೇಷನ್ ಪ್ರಕರಣ: ನಾನು ಮಾಡಿದ್ದಲ್ಲ, ಬಿಜೆಪಿಯವರೇ ಮಾಡಿದ್ದು - ಸಿದ್ಧರಾಮಯ್ಯ ಸ್ಪಷ್ಟನೆ

ಬೆಂಗಳೂರ: ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಅನ್ನು ನನ್ನ ಅವಧಿಯಲ್ಲಿ ಮಾಡಿದ್ದಲ್ಲ. ಅದು ಬಿಜೆಪಿ ಸರ್ಕಾರದ ( BJP Government ) ಅವಧಿಯಲ್ಲಿ ಮಾಡಿದ್ದಕ್ಕೆ ನಾನು ಸಹಿ ಹಾಕಿದ್ದೇನೆ ಅಷ್ಟೇ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಸ್ಪಷ್ಟ ಪಡಿಸಿದ್ದಾರೆ.

ಇಂದು ನಗರದ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಅರ್ಕಾವತಿ ಬಡಾವಣೆ 2003ರಲ್ಲಿ ನಿರ್ಮಾಣವಾಗಿತ್ತು. 1919 ಎಕಗೆ 13 ಗುಂಟೆ ಪ್ರದೇಶದಲ್ಲಿ ನಿರ್ಮಾಣ ಡಿನೋಟಿಫಿಕೇಷನ್ ಮಾಡಲಾಗಿದೆ. ನಾವು ಅಧಿಕಾರಕ್ಕೆ ಬರುವ ಮುನ್ನವೇ ಇದೆಲ್ಲ ನಡೆದಿತ್ತು. ಆಗ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಗೆ ಫೈಲ್ ಹೋಗಿತ್ತು. ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನಲೆಯಲ್ಲಿ ಫೈಲ್ ವಾಪಾಸ್ಸು ಕಳುಹಿಸಿದ್ದರು. ನಾನು ಅಧಿಕಾರಕ್ಕೆ ಬಂದ ನಂತ್ರ ನನ್ನ ಬಳಿಗೆ ಫೈಲ್ ಬಂದಿತ್ತು ಎಂದರು.

ಈ ನಡುವೆ ಅರ್ಕಾವತಿ ಡಿನೋಟಿಫಿಕೇಷ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಮಿಟಿ ರಚನೆ ಮಾಡಲಾಗಿತ್ತು. ಸುಪ್ರೀಂ ಆದೇಶದಂತೆ ಮರುಪರಿಶೀಲನೆ ಮಾಡಿದ್ದಾರೆ. ವರದಿ ನ್ಯಾಯಯುತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಅದು ರೀಡೋ ಅಲ್ಲ ರೀ ಮಾಡಿಫೈಡ್ ಸ್ಕೀಮ್ ಎಂದು ಹೇಳಿದ್ದರು ಎಂದರು.

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಸಂಬಂಧ ಸುಪ್ರೀಂ ಕೋರ್ಟ್ ರಚಿಸಿದ್ದಂತ ಸಮಿತಿ ನೀಡಿದ್ದಂತ ವರದಿ ಮೇರೆಗೆ ಫೈಲ್ ಮೇಲೆ ರೀ ಮಾಡಿಫೈಡ್ ಸ್ಕೀಮ್ ಅಂತ ಬರೆದಿದ್ದೆ. ನಾನು ಅನುಮೋದಿಸಲಾಗಿದೆ ಎಂದು ಫೈಲ್ ಮೇಲೆ ಕನ್ನಡದಲ್ಲಿಯೇ ಬರೆದಿದ್ದೆ. ನಾನು ಯಾವುದೇ ಡೀನೋಟಿಫಿಕೇಷನ್ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.