ತಾಯಿ ನೋಡಿದ ವರನನ್ನು ಒಪ್ಪದ ಮಗಳು: ಮರ್ಯಾದೆಗಂಜಿ ಕರುಳಕುಡಿಯನ್ನೇ ಕೊಂದ ಹೆತ್ತವ್ವ
ಚೆನ್ನೈ: ಹೆತ್ತ ತಾಯಿ ಆಯ್ಕೆ ಮಾಡಿದ ವರನನ್ನು ಮದುವೆಯಾಗಲು ನಿರಾಕರಿಸಿದ 20 ವರ್ಷದ ಮಗಳನ್ನು ಆಕೆಯ ತಾಯಿ ಕತ್ತು ಹಿಸುಕಿ ಕೊಂದಿರುವ ಘಟನೆ ಬುಧವಾರ ಚೆನ್ನೈನಲ್ಲಿ ನಡೆದಿದೆ.
ನರ್ಸ್ ಆಗಿ ಕೆಲಸ ಮಾಡುತ್ತಿದ್ದ 20 ವರ್ಷದ ಪಿ ಅರುಣಾ ಕುಟುಂಬದವರು ನೋಡಿ, ಒಪ್ಪಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.
ಪಿ ಅರುಣಾ ಅವರ ತಂದೆ ಮತ್ತು ಸಹೋದರ ಚೆನ್ನೈನಲ್ಲಿ ಆಟೋ ಡ್ರೈವರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಅತ್ಯಂತ ಹಿಂದುಳಿದ ವರ್ಗಗಳ (ಎಂಬಿಸಿ) ಸಮುದಾಯಕ್ಕೆ ಸೇರಿದ ಸಂತ್ರಸ್ತೆ ಕೊಯಮತ್ತೂರಿನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಆರು ತಿಂಗಳ ಹಿಂದೆ ಮನೆಗೆ ಮರಳಿದ್ದರು.
ಆಕೆಯ ತಾಯಿ ಆಯ್ಕೆ ಮಾಡಿದ ನಿರೀಕ್ಷಿತ ವರನ ಕುಟುಂಬ ನಿನ್ನೆ ಅವರನ್ನು ಭೇಟಿ ಮಾಡಬೇಕಿತ್ತು. ಆದರೆ ಅರುಣಾ ಅವರನ್ನು ಭೇಟಿಯಾಗಲು ಮತ್ತು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ನಡೆದ ತೀವ್ರ ವಾಗ್ವಾದ ಕೊಲೆಗೆ ಕಾರಣವಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.