ಕಾಂಗ್ರೆಸ್ ಷಡ್ಯಂತ್ರಕ್ಕೆ ರಮೇಶ್ ಜಾರಕಿಹೊಳಿ ಬಲಿಪಶು ಮಾಡಿದ್ದಾರೆ: ರೇಣುಕಾಚಾರ್ಯ

ದಾವಣಗೆರೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಷಡ್ಯಂತ್ರಕ್ಕೆ ರಮೇಶ್ ಜಾರಕಿಹೊಳಿ ಬಲಿಪಶುಯಾಗುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಆಡಿಯೋ ರಿಲೀಸ್ ವಿಚಾರದ ಕುರಿತು ಮಾತನಾಡಿ, ಡಿಕೆಶಿ ಅವರನ್ನು ನಾವು ಮುಗಿಸೋದಲ್ಲ, ಕಾಂಗ್ರೆಸ್ ಮುಖಂಡರೇ ರಾಜಕೀಯವಾಗಿ ಮುಗಿಸುತ್ತಾರೆ. ಕನಕಪುರ, ಸಾತನೂರು ಜನ ರಾಜಕೀಯವಾಗಿ ಮುಗಿಸುತ್ತಾರೆ. ಕಾಂಗ್ರೆಸ್ ನಲ್ಲೇ ಸಿಎಂ ಗದ್ದಿಗೆಗೆ ಪೈಪೋಟಿ ಮಾಡುತ್ತಿದ್ದಾರೆ. ಸಿಎಂ ಅಭ್ಯರ್ಥಿಗಳು ಕ್ಯೂ ನಿಂತಿದ್ದಾರೆ. ಕಾಂಗ್ರೆಸ್ ಗೆ ತಾಕತ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಣೆ ಮಾಡಿ ಚುನಾವಣೆಗೆ ಬರಲಿ ಎಂದರು.