ಎಸ್ಡಿಟಿಯು ನೇತೃತ್ವದಲ್ಲಿ ಕಾರ್ಮಿಕರ ಬೃಹತ್ ಸಮಾವೇಶ
ಕಟ್ಟಡ ಮತ್ತು ಇತರೆ ಕಾರ್ಮಿಕರ ಬೃಹತ್ ಸಮಾವೇಶ ಸೋಶಿಯಲ್ ಡೆಮಾಕ್ರಟಿಕ ಟ್ರೇಡ್ ಯೂನಿಯನ್ ಜಿಲ್ಲಾ ಅಧ್ಯಕ್ಷರಾದ ಇರ್ಷಾದ ಅಹ್ಮದ ರಿತ್ತಿರವರ ನೇತೃತ್ವದಲ್ಲಿ ಹಳೇ ಹುಬ್ಬಳ್ಳಿ ನೂರಾನಿ ಪ್ಲಾಟದಲ್ಲಿರುವ ನೂರಾನಿ ಕಲ್ಯಾಣ ಮಂಟಪದಲ್ಲಿ ಜರುಗಿತು. ಈ ವೇಳೆ ಮಾತನಾಡಿದ ಇರ್ಷಾದ್, ಸಂಘಟನೆಯು ನಾಲ್ಕು ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಮತ್ತು ಕರ್ನಾಟಕದ 10 ಜಿಲ್ಲೆಗಳಲ್ಲಿ ಕೆಲಸಮಾಡುತ್ತಿದೆ ಹಾಗೂ ಎಲ್ಲಾ ವರ್ಗದ ಕಾರ್ಮಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಸೌಲಭ್ಯ ಮತ್ತು ಅನೂದಾನಗಳು ತಲುಪಿಸುವ ಹಾಗೂ ಕಾರ್ಮಿಕರ ಸಮಸ್ಯೆಗಳು ಬಗೆಹರಿಸುವ ಉದ್ದೇಶದಿಂದ ರಚನೆ ಮಾಡಲಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಅಶೋಕ, ಓಡಿಯರ ಮತ್ತು ರಾಜೀವ ಹಿರೇಮಠ, ಎಸ್ಡಿಟಿಯು ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಫಯಾಜ ಅಹ್ಮದ, ಪ್ರಧಾನ ಕಾರ್ಯದರ್ಶಿ ಫಕ್ರುದ್ದೀನ ಶೇಖ, ಕಾರ್ಯದರ್ಶಿ ಖತಬುದ್ದೀನ ಬೇಟಗೇರಿ, ಖಜಾಂಚಿ ಅಬ್ದುಲ್ ಜಬ್ಬಾರ ಬಿಸ್ತಿ, ಜಿಲ್ಲಾ ಸಮಿತಿ ಸದಸ್ಯರಾದ ಜಾಫರ ಗಾಮನಗಟ್ಟ, ಸೈಯದ ವಸೀಮ ಖಾದ್ರಿ ಶಾನವಾಜ ಹಾಗೂ ನೂರಾರು ಕಾರ್ಮಿಕರು ಪಾಲ್ಗೊಂಡಿದರು.