ಭಿಕ್ಷಾಟನೆ ಮೂಲಕ ವಿನೂತನವಾಗಿ ಪ್ರತಿಭಟಿಸಿದ ಕಲಾವಿದರು

ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಶ್ರೀ ಮಲ್ಲಿಕಾರ್ಜುನ ಅಲೆಮಾರಿ ದಾಲಪಟಾ ಕಲಾವಿದರ ಸಂಘ ಹಾಗೂ ಶ್ರೀ ಅಲೆಮಾರಿ ಜಾನಪದ ಗೊಂಬೆ ಕುಣಿತ ಕಲಾವಿದರ ಸಂಘದ ಸದಸ್ಯರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾವಣೆಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಭಿಕ್ಷಾಟನೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿ ಉತ್ಸವ ಮತ್ತು ಜಯಂತಿಗಳ ಆಚರಣೆ ಅನುಮತಿ ನೀಡಿಲ್ಲದ ಪರಿಣಾಮ ಉತ್ಸವಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕು ಅತಂತ್ರಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಈ ಸಂದರ್ಭದಲ್ಲಿ ಕರ್ನಾಟಕ ರಂಗಕಲಾ ಪರಿಷತ್ತಿನ ಅಧ್ಯಕ್ಷ ಸಂಜೀವ ದುಮಕನಾಳ, ಪ್ರಕಾಶ ಜಾಡರ, ಧಾರವಾಡ ಜಿಲ್ಲಾ ವಾಧ್ಯವೃಂದ ಕಲಾವಿದರ ಸಂಘದ ಸದಸ್ಯರಾದ ವಿಜಯಕುಮಾರ, ರಾಜೇಶ್ವರಿ ಜಾಲಿಹಾಳ ಸೇರಿದಂತೆ ಹುಬ್ಬಳ್ಳಿಯ ರಂಗಭೂಮಿ ಕಲಾವಿದರು ಇದ್ದರು.