ಒಂದಲ್ಲ, ಎರಡಲ್ಲ ಮೂರು ಮದುವೆಯಾದ ಹುಬ್ಬಳ್ಳಿ ಯೋಧನ ಕಥೆ ಇದು

ಒಂದಲ್ಲ, ಎರಡಲ್ಲ ಮೂರು ಮದುವೆಯಾದ ಹುಬ್ಬಳ್ಳಿ ಯೋಧನ ಕಥೆ ಇದು
ಹುಬ್ಬಳ್ಳಿ: ಯೋಧ (Soldier) ಅಂದ್ರೆ ಎಲ್ಲರೂ ಸಾರ್ವಜನಿಕರು ಅತ್ಯಂತ ಗೌರವದಿಂದ ಕಾಣುತ್ತಾರೆ. ನಿವೃತ್ತಿಯಾಗಿ ಬಂದ್ರೆ ಅದ್ಧೂರಿಯಾಗಿ ಗ್ರಾಮಕ್ಕೆ ಬರಮಾಡಿಕೊಳ್ಳುತ್ತಾರೆ. ಗ್ರಾಮದಲ್ಲಿರುವ ಸೈನಿಕ ಕುಟುಂಬವನ್ನು ಗೌರವದಿಂದ ಕಾಣಲಾಗುತ್ತದೆ. ಆದ್ರೆ ಹುಬ್ಬಳ್ಳಿಯ (Hubballi)ಯೋಧನೋರ್ವ ಮೂರು ಮದುವೆ(Marriage)ಯಾಗಿದ್ದು, ಎರಡನೇ ಪತ್ಹಿ (Wife) ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹುಬ್ಬಳ್ಳಿ ತಾಲೂಕಿನ ನಲವಡಿ ಗ್ರಾಮದ (Nalavadi Village) ಯೋಧ ಗುರುಸಿದ್ದಪ್ಪನ ವಿರುದ್ಧ ಈ ಆರೋಪಗಳು ಕೇಳಿ ಬಂದಿವೆ, ಎರಡನೇ ಹೆಂಡತಿ ಎನ್ನಲಾದ ಮಂಜುಳಾ ಎಂಬವರು ದೂರು ದಾಖಲಿಸಿದ್ದಾರೆ.
ಸದ್ಯ ಪಂಜಾಬ್ Punjab) ನಲ್ಲಿ ಸೇವೆ ಸಲ್ಲಿಸುತ್ತಿರುವ ಗುರುಸಿದ್ದಪ್ಪ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ,

2015ರಲ್ಲಿ ಮೊದಲ ಮದುವೆ

2015ರಲ್ಲಿ ಗುರುಸಿದ್ದಪ್ಪನ ಮೊದಲ ಮದುವೆ ನಡೆದಿತ್ತು, ಕುಟುಂಬಸ್ಥರೇ ನಿಶ್ಚಯಿಸಿ ಗಗದ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ದೀಪಾ ಎಂಬವರನ್ನು ಗುರುಸಿದ್ದಪ್ಪ ಮದುವೆಯಾಗಿದ್ದನು. ದಂಪತಿಗೆ ಒಂದು ಮಗು ಸಹ ಇದೆ. ಆದ್ರೆ ಮೊದಲ ಪತ್ನಿ ದೀಪಾ ಜೊತೆ ಗುರುಸಿದ್ದಪ್ಪ ಕಿರಿಕ್ ಮಾಡಿಕೊಂಡಿದ್ದನು, ಪತಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ. ಆತನೊಂದಿಗೆ ಜೀವನ ನಡೆಸಲು ಆಗಲ್ಲ ಎಂದು ದೀಪಾ ಮಗುವಿನ ಜೊತೆ ತವರು ಸೇರಿದ್ದರು.

:ಪತಿಯನ್ನ ತೊರೆದು 2ನೇ ಮದುವೆಯಾದ ಯುವತಿ: ಆಕೆಗೆ ಕೈ ಕೊಟ್ಟು ಬೇರೊಂದು ಮದುವೆಯಾದ 2ನೇ ಪತಿ

ಇತ್ತ ಮೊದಲ ಪತ್ನಿ ದೀಪಾ ತವರು ಮನೆ ಸೇರುತ್ತಿದ್ದಂತೆ ಮ್ಯಾಟ್ರಿಮೋನಿಯಾದಲ್ಲಿ ವಧು ಬೇಕಾಗಿದೆ ಎಂದು ಪೋಸ್ಟ್ ಮಾಡಿಕೊಂಡಿದ್ದಾನೆ. ಮ್ಯಾಟ್ರಿಮೊನಿಯಾದಲ್ಲಿ ಪರಿಚಯವಾದ ಮಂಜುಳಾಗೆ ಸುಳ್ಳು ಹೇಳಿ ಮದುವೆಯಾಗಿದ್ದಾನೆ. ಮಂಜುಳಾರನ್ನು ಬಾಡಿಗೆ ಮನೆಯಲ್ಲಿರಿಸಿ ಸಂಸಾರ ನಡೆಸಿದ್ದನು. ಇಷ್ಟಕ್ಕೆ ಗುರುಸಿದ್ದಪ್ಪನ ರಂಗೀನಾಟ ನಿಂತಿಲ್ಲ. ಮಂಜುಳಾ ನಂತರ ಸುಧಾ ಎಂಬವರನ್ನು ಸಹ ಮೋಸ ಮಾಡಿ ಮದುವೆಯಾಗಿದ್ದಾನೆ.

ದೂರು ದಾಖಲಿಸಿದ ಎರಡನೇ ಪತ್ನಿ ಮಂಜುಳಾ

ಪತಿಯ ಮೊದಲ ಮತ್ತು ಮೂರನೇ ಮದುವೆ ವಿಷಯ ತಿಳಿದ ಮಂಜುಳಾ, ಪತಿ ಗುರುಸಿದ್ದಪ್ಪ ತನ್ನನ್ನು ಮೋಸದಿಂದ ವಿವಾಹವಾಗಿದ್ದಾನೆ ಎಂದು ಆರೋಪಿಸಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗುರುಸಿದ್ದಪ್ಪನ ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

:ಜಾತಕ ಬದಲಿಸಿ ಮದುವೆ ಮಾಡಿದ್ದಕ್ಕೆ ಹೆಂಡತಿಗೆ ವಿಚ್ಛೇದನಕ್ಕೆ ಮುಂದಾದ ಗಂಡ; ಬಾಂಬೆ ಹೈಕೋರ್ಟ್ ಹೇಳಿದ್ದೇನು?

ಪಂಜಾಬ್ ನಲ್ಲಿರುವ ಗುರುಸಿದ್ದಪ್ಪ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಇತ್ತ ಮೊದಲ ಪತ್ನಿ ದೀಪಾ ಮತ್ತು ಎರಡನೇ ಪತ್ನಿ ಸುಧಾ ಅವರಿಗೆ ಪತಿಯ ಕಳ್ಳಾಟ ತಿಳಿದಿದೆಯೋ ಗೊತ್ತಿಲ್ಲ, ಮೊದಲ ಪತ್ನಿಗೆ ವಿಚ್ಛೇದನ ನೀಡಿರುವ ಬಗ್ಗೆಯೂ ತಿಳಿದು ಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.

ವಿವಾಹವಾಗುವ ಪುರುಷರ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಮುದುಕನನ್ನು ಯುವತಿ ಮದುವೆಯಾಗುವುದು, ಮುದುಕಿಯನ್ನು ಯುವಕ ಮದುವೆಯಾಗುವುದು ಎಂಬ ಸುದ್ದಿ ಹರಿದಾಡುವುದನ್ನು ಗಮನಿಸಿರಬಹುದು.

ಕೆಲವರು 5 ವರ್ಷ ಅಂತರ ಇದ್ದರೆ ಉತ್ತಮ ಎಂದರೆ, ಇನ್ನು ಕೆಲವರು ಮೂರರಿಂದ ಆರು ವರ್ಷ ಎನ್ನುತ್ತಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರು ಕಿರಿಯ ಮಹಿಳೆಯರನ್ನು ಮದುವೆಯಾಗುತ್ತಾರೆ ಮತ್ತು ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದ ಪುರುಷರನ್ನು ಮದುವೆಯಾಗಲು ಬಯಸುವುದು ಸರ್ವೇ ಸಾಮಾನ್ಯವಾಗಿದೆ.

ಅಧ್ಯಯನ ಏನು ಹೇಳುತ್ತದೆ?

ಫಿನ್‍ಲ್ಯಾಂಡಿನ ಸಾಮಿ ಜನರನ್ನೊಳಗೊಂಡು ನಡೆಸಿದ ಹೊಸ ಸಂಶೋಧನೆ ಪ್ರಕಾರ, ಪುರುಷರು ತಮ್ಮ 15 ವರ್ಷಕ್ಕಿಂತ ಕಿರಿಯ ವಯಸ್ಸಿನ ಮಹಿಳೆಯನ್ನು ಮದುವೆಯಾಗಬೇಕು, ಅದು ಬದುಕುವ ಸಾಧ್ಯತೆ ಹೆಚ್ಚಿಸುತ್ತದೆ ಎಂದು ತೋರಿಸಿದೆ.

ಮದುವೆಯಲ್ಲಿ ಪೋಷಕರ ವಯಸ್ಸಿನ ವ್ಯತ್ಯಾಸವು ಸಂತಾನೋತ್ಪತ್ತಿ ಯಶಸ್ಸಿನ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ನಾವು ಅಧ್ಯಯನ ಮಾಡಿದ್ದೇವೆ. "14.6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ಮದುವೆಯಾಗುವುದು ಪುರುಷರ ಜೀವಿತಾವಧಿಯ ಸಂತಾನೋತ್ಪತ್ತಿ ಯಶಸ್ಸನ್ನು ಗರಿಷ್ಠಗೊಳಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ.